ಅತಿರೇಕದ ವರ್ತನೆಗೆ ಇಲ್ಲ ಅವಕಾಶ

11 ckm 6
ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಎಸ್‌ಪಿ ವಿಕ್ರಮ ಅಮಟೆ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆ ಸಂದರ್ಭದಲ್ಲಿ ಸೂಕ್ಷö್ಮ ಸ್ಥಳಗಳಲ್ಲಿ ಅತಿರೇಕದ ವರ್ತನೆ ಇರಬಾರದು. ಸಂಘಟಕರು ಇದರ ಜವಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಮ್ ಅಮಟೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನಲೆಯಲ್ಲಿ ಸೋಮವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಜಿಲ್ಲಾಡಳಿತ ಹೊರಡಿಸುವ ಆದೇಶ ಹಾಗೂ ಇತರೆ ಇಲಾಖೆಗಳಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

ಆಗಸ್ಟ್ ೨೬ ಹಾಗೂ ೨೭ರಂದು ಗೌರಿ ಗಣೇಶ ಹಬ್ಬ ನಡೆಯಲಿದೆ. ಸೆಪ್ಟಂಬರ್ ೫ ರಿಂದ ಈದ್ ಮಿಲಾದ್ ನಡೆಯಲಿದೆ. ಈ ಎರಡು ಹಬ್ಬಗಳು ಈ ಬಾರಿಯೂ ಒಟ್ಟಿಗೆ ಬಂದಿವೆ. ಎಲ್ಲರೂ ಕೂಡ ಅವರವರ ಸಂಪ್ರದಾಯದAತೆ ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು ಎಂಬುದು ಅಪೇಕ್ಷೆಯಾಗಿದೆ. ಈ ಬಾರಿ ಜಿಲ್ಲೆಯಲ್ಲಿ ೧,೮೦೦ ಕಡೆಗಳಲ್ಲಿ ಸಾರ್ವಜನಿಕ ಗಣಪತಿಯನ್ನು ಪ್ರತಿಷ್ಠಾನೆ ಮಾಡಲು ಉz್ದೆÃಶಿಸಲಾಗಿದೆ. ಹಾಗೆಯೇ ೨೭ ಕಡೆಗಳಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯಲಿವೆ. ಈ ಸಂದರ್ಭಗಳಲ್ಲಿ ಬೇರೆ ಧರ್ಮಕ್ಕೆ ಧಕ್ಕೆ, ಪರಿಸರಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಮೆರವಣಿಗೆ ಸಂದರ್ಭದಲ್ಲಿ ಅತಿರೇಕದ ವರ್ತನೆ ಇರಬಾರದು. ಅಂತಹ ಸಂದರ್ಭದಲ್ಲಿ ಸಂಘಟಕರು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಪೆಂಡಾಲ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮರಗಳನ್ನು ಅಳವಡಿಸಬೇಕು. ರಾತ್ರಿ ೧೦ ಗಂಟೆಯಿAದ ಮರು ದಿನ ಬೆಳಗ್ಗೆ ೬ ಗಂಟೆಯ ಅವಧಿಯೊಳಗೆ ಕರ್ಕಶ ಶಬ್ಧ ಬರುವ ಸೌಂಡ್ ಸಿಸ್ಟಮ್‌ಗಳನ್ನು ಬಳಸಬಾರದು. ಈ ಸಂಬAಧ ಸುಪ್ರಿಂ ಕೋರ್ಟ್ ಹೊರಡಿಸಿರುವ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದರು.

ಸೋಶಿಯಲ್ ಮೀಡಿಯಾದಲ್ಲಿ ಹಬ್ಬಗಳಿಗೆ ಸಂಬAಧಿಸಿದAತೆ ಬರುವ ತಪ್ಪು ಮಾಹಿತಿಗಳ ಬಗ್ಗೆ ಯಾರೂ ಕೂಡ ತಲೆ ಕೆಡಿಸಿಕೊಳ್ಳಬಾರದು. ಅಂತಹದೇನೂ ಕಂಡು ಬಂದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಇಲಾಖೆಯೂ ಕೂಡ ಅವುಗಳ ಮೇಲೆ ಕಣ್ಣಿಟ್ಟಿದೆ ಎಂದು ತಿಳಿಸಿದರು.

ಬೈಕ್ ಓಡಿಸುವ ಸಂದರ್ಭದಲ್ಲಿ ಕರ್ಕಶ ಧ್ವನಿ ಬರುವ ರೀತಿಯಲ್ಲಿ ಬೈಕಿನ ಸೈಲೆನ್ಸರ್ ಬದಲಾಯಿಸುತ್ತಾರೆ. ಅಂತಹ ಗ್ಯಾರೇಜ್‌ಗಳನ್ನು ಗುರುತಿಸಿ ಈಗಾಗಲೇ ನೋಟೀಸ್ ಕೂಡ ಜಾರಿ ಮಾಡಲಾಗಿದೆ. ಸಂಘಟಕರು, ಅಂತಹ ಬೈಕ್‌ಗಳ ಮೇಲೆ ನಿಗಾ ಇಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಹಾಗೂ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಂಗಲ್ ವಿಂಡೋ ಸಿಸ್ಟಮ್

ಸಾರ್ವಜನಿಕ ಸ್ಥಳಗಳಲ್ಲಿ ಗೌರಿ ಗಣೇಶ ಪ್ರತಿಷ್ಟಾಪನೆ ಹಾಗೂ ಮೆರವಣಿಗೆ, ಈದ್ ಮಿಲಾದ್ ಹಿನ್ನಲೆಯಲ್ಲಿ ನಡೆಯಲಿರುವ ಮೆರವಣಿಗೆಗೆ ಸಂಘಟಕರು ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಹೀಗಾಗಿ ಸಿಂಗಲ್ ವಿಂಡೋ ಸಿಸ್ಟಮ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಎಸ್‌ಪಿ ವಿಕ್ರಮ ಅಮಟೆ ತಿಳಿಸಿದರು.

ಆಗಸ್ಟ್ ೧೬ ರಿಂದ ೨೨ರೊಳಗೆ ಗಣೇಶ ಹಬ್ಬದ ಆಚರಣೆಗೆ ಅನುಮತಿ ನೀಡಲಾಗುವುದು. ಆಗಸ್ಟ್ ೨೬ರಿಂದ ಸೆಪ್ಟಂಬರ್ ೨ರವರೆಗೆ ಈದ್ ಮಿಲಾದ್ ಮೆರವಣಿಗೆಗೆ ಸಂಬAಧಿಸಿದAತೆ ಸಿಂಗಲ್ ವಿಂಡೋನಲ್ಲಿ ಅನುಮತಿ ನೀಡಲಾಗುವುದು ಎಂದು ಎಸ್‌ಪಿ ಮಾಹಿತಿ ನೀಡಿದರು.

ಮೆರವಣಿಗೆಯಲ್ಲಿ ಡೀಜೆ ಬಳಸದಿರಲು ತೀರ್ಮಾನ ?

ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಡೀಜೆ ಬಳಸದಿರಲು ಉz್ದÉÃಶಿಲಾಗಿದೆ. ಈ ಸಂಬAಧ ಚಿಕ್ಕಮಗಳೂರಿನ ಅಂಜುಮನ್ ಸಂಸ್ಥೆಯ ಸಭೆಯಲ್ಲಿ ಪ್ರಸ್ತಾಪ ಕೂಡ ಮಾಡಲಾಗಿದೆ ಎಂದು ಸಭೆಯಲ್ಲಿದ್ದ ಮುಸ್ಲಿಂ ಮುಖಂಡರು ಮಾಹಿತಿ ನೀಡಿದರು.

ಇದಕ್ಕೆ ಅಧಿಕಾರಿಗಳು ಹಾಗೂ ಸಭೆಯಲ್ಲಿದ್ದ ಕೆಲವು ಮಂದಿ ಇದು ಉತ್ತಮ ಬೆಳವಣಿಗೆ ಎಂದು ಹೇಳುತ್ತಿದ್ದಂತೆ ಡಿಜೆಗೆ ಅನುಮತಿ ಕೊಡಬೇಡಿ ಎಂದು ಕೆಲವರು ಒತ್ತಾಯಿಸಿದರು. ಆಗ ಎಸ್‌ಪಿ ಡಿಜೆ ಬಳಸಬೇಡಿ ಎಂದು ನಾವು ಒತ್ತಾಯ ಪೂರ್ವಕವಾಗಿ ಹೇಳಲು ಬರುವುದಿಲ್ಲ. ಸಂಘಟನೆಗಳೇ ಡಿಜೆ ಬಳಸದಿರುವ ನಿರ್ಧಾರಕ್ಕೆ ಬಂದರೆ ನಮ್ಮ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಲಿದೆ ಎಂದರು.

ಈದ್ ಮಿಲಾದ್ ಒಂದು ತಿಂಗಳು ಆಚರಣೆ

ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನವನ್ನು ಈದ್ ಮಿಲಾದ್ ಹಬ್ಬವನ್ನಾಗಿ ಮುಸ್ಲಿಂ ಸಮುದಾಯದವರು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಈ ಹಬ್ಬದ ಆಚರಣೆಗೆ ೧,೫೦೦ ವರ್ಷದ ಹಿನ್ನಲೆ ಇರುವುದರಿಂದ ಚಿಕ್ಕಮಗಳೂರಿನ ಉಪ್ಪಳ್ಳಿಯಲ್ಲಿ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇವುಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ನಗರದಲ್ಲೆಡೆ ದೀಪಾಲಂಕಾರ ಮಾಡಲಾಗುವುದು ಎಂದು ಮುಸ್ಲಿಂ ಮುಖಂಡ ಯೂಸೂಫ್ ಹಾಜಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net