ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

Application
Published on

ಚಾಮರಾಜನಗರ: ತಾಲೂಕಿನ ಹರವೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಅಥವಾ ಕಾಯಂ ಸಿಬ್ಬಂದಿ ನೇಮಕವಾಗುವವರೆಗೆ ತಾತ್ಕಾಲಿಕವಾಗಿ ನಿಯಮಾನುಸಾರ ದೈಹಿಕ ಶಿಕ್ಷಣ ವಿಷಯಕ್ಕೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಪ್ರೌಢಶಾಲಾ ಶಿಕ್ಷಕರ ಕನಿಷ್ಠ ವಿದ್ಯಾರ್ಹತೆಯಾದ ಪದವಿಯೊಂದಿಗೆ ಬಿ.ಪಿ.ಎಡ್ ಮಾಡಿರುವ ಅಭ್ಯರ್ಥಿಗಳು ಜುಲೈ 10ರೊಳಗೆ ಹರವೆ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಸಲ್ಲಿಸಬೇಕು ಎಂದು ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net