ಅತಿಥಿ ಉಪನ್ಯಾಸಕರ ಪ್ರತಿಭಟನೆ

CTD 24 STRIKE--08
Published on

ಚಿತ್ರದುರ್ಗ: ಸೇವೆ ಕಾಯಂಗೆ ಒತ್ತಾಯಿಸಿ ರಾಜ್ಯಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ನಗರದ ಡಿಸಿ ಕಚೇರಿ ಬಳಿ ನಡೆ ಸುತ್ತಿರುವ ಪ್ರತಿಭಟನೆ ಶುಕ್ರವಾರ ಮುಂದುವರಿಯಿತು. ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಜಿ.ಎನ್.ಯಶೋಧರ್ ಮಾತ ನಾಡಿ, ಬೇಡಿಕೆಗಳಿಗೆ ಎಲ್ಲಿಯವರೆಗೂ ಸರ್ಕಾರ ಸ್ಪಂದಿಸುವುದಿಲ್ಲವೋ ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಯಲಿದೆ.
ಡಿಸೆಂಬರ್ 4ರಿಂದ ಆರಂಭವಾಗಲಿರುವ ವಿಧಾನಸಭಾ ಚಳಿಗಾಲ ಅಧಿವೇಶನದ ವೇಳೆ ಬೆಳಗಾವಿಗೆ ತೆರಳಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಗಮನ ಸೆಳೆಯಲಾಗುವುದು ಎಂದರು. ಚಂದನಾ, ವಿ.ಎಸ್.ಮಂಜುನಾಥ್, ಶಿವಪ್ರಕಾಶ್, ಮೊಹಿದ್ದೀನ್‌ಖಾನ್, ಡಾ. ಗುರುಸ್ವಾಮಿ, ಡಾ. ಜಗದೀಶ್‌ಕೆರೆನಹಳ್ಳಿ, ಸುವರ್ಣಮ್ಮ, ಡಾ.ಟಿ.ನಂದಿನಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net