ಅಣ್ಣಿಗೇರಿಯಲ್ಲಿ ಆಲಿಕಲ್ಲು ಮಳೆ

20 ANG 1
Published on

ಅಣ್ಣಿಗೇರಿ: ತಾಲೂಕಿನ ವಿವಿಧೆಡೆ ಬುಧವಾರ ಸಂಜೆ 5.30ರಿಂದ 7.30ರವರೆಗೆ ಧಾರಾಕಾರ ಮಳೆಯಾಗಿದೆ. ಪಟ್ಟಣದಲ್ಲಿ ಆಲಿಕಲ್ಲು ಮಳೆಯಾಗಿದೆ. ತಾಲೂಕಿನ ನಲವಡಿ, ಭದ್ರಾಪುರ ಮೊದಲಾದೆಡೆ ಭಾರಿ ಮಳೆ, ಗಾಳಿಗೆ ಕೆಲವು ಮನೆಗಳ ಮೇಲೆ ಹೊದಿಸಿದ್ದ ತಾಡಪತ್ರಿಗಳು, ಹೆಂಚು, ಸೀಟುಗಳು ಹಾರಿಬಿದ್ದಿವೆ. ಪಟ್ಟಣದ ಕುರಬಗೇರಿ ಓಣಿಯ ಕೃಷ್ಣಾ ಭಜಂತ್ರಿ ಅವರ ಮನೆ ಮುಂಭಾಗದಲ್ಲಿ ಗಟಾರ್ ತುಂಬಿ ರಸ್ತೆಯಲ್ಲಿ ನೀರು ಹರಿಯಿತು. ಇದರಿಂದ ಜನರ ಸಂಚಾರಕ್ಕೆ ತೊಂದರೆ ಉಂಟಾಯಿತು. ಇನ್ನು ಹೊರಕೇರಿ ಓಣಿ, ಚಾನಸಾಲಿ ದರ್ಗಾ ಹತ್ತಿರ, ಜನ್ನತ್ ನಗರದಲ್ಲಿ ವಿದ್ಯುತ್ ಕಂಬಗಳು ಬಾಗಿವೆ. ಆದರೆ, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net