ಅಣ್ಣಿಗೇರಿ ಠಾಣೆಯಲ್ಲಿ ಜನಸ್ನೇಹಿ ಉದ್ಯಾನಕ್ಕೆ ಚಾಲನೆ

14-ANG-1
Published on

ಅಣ್ಣಿಗೇರಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೂತನವಾಗಿ ನಿರ್ವಿುಸಲಾಗಿರುವ ಜನಸ್ನೇಹಿ ಉದ್ಯಾನವನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗಣೇಶ ಚತುರ್ಥಿ ಮತ್ತು ಮೊಹರಂ ಅನ್ನು ಮನೆಯಲ್ಲೇ ಆಚರಿಸಬೇಕು. ಸರ್ಕಾರ ನೀಡಿದ ಆದೇಶವನ್ನು ಯಾರೊಬ್ಬರೂ ಉಲ್ಲಂಘನೆ ಮಾಡಬಾರದು. ರಾಜ್ಯದಲ್ಲಿ ಕರೊನಾ ಹಾವಳಿ ಹೆಚ್ಚಾಗಿದ್ದು, ಡಿಜೆ ಮತ್ತು ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಸಾರ್ವಜನಿಕ ಗಣೇಶನನ್ನು ಕೂರಿಸುವಂತಿಲ್ಲ. ಗಣೇಶ ಪ್ರತಿಷ್ಠಾಪನೆ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಡಿವೈಎಸ್ಪಿ ರವಿ ನಾಯಕ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಠಾಣೆಗಳಲ್ಲಿ ಜನಸ್ನೇಹಿ ಉದ್ಯಾನ ನಿರ್ಮಾಣ ಮಾಡುವಂತೆ ಸೂಚಿಸಲಾಗುವುದು ಎಂದರು.

ಅಣ್ಣಿಗೇರಿ ಠಾಣಾಧಿಕಾರಿ ಲಾಲ್​ಸಾಬ್ ಜೂಲಕಟ್ಟಿ, ತಹಸೀಲ್ದಾರ್ ಕೊಟ್ರೇಶ ಗಾಳಿ, ಸಿಪಿಐ ಸಿ.ಜಿ. ಮಠಪತಿ, ಪುರಸಭೆ ಮುಖ್ಯಾಧಿಕಾರಿ ಪಿ.ಎಫ್. ಕಟಗಿ, ಷಣ್ಮುಖ ಗುರಿಕಾರ, ನಿಜಲಿಂಗಪ್ಪ ಅಕ್ಕಿ, ಮಂಜುನಾಥ ಮಾಯಣ್ಣವರ, ಶಿವಯೋಗಿ ಸುರಕೋಡ ಬುಡೆಶರೀಫ್ ನದಿಮುಲ್ಲಾ, ಶಿವಶಂಕರ ಕಲ್ಲೂರ, ಭಗವಂತಪ್ಪ ಪುಟ್ಟಣ್ಣವರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net