ಅಣ್ಣಾಸಾಹೇಬ ಅವಿರೋಧ ಆಯ್ಕೆ

28Rayabag1
Published on

ರಾಯಬಾಗ: ತಾಲೂಕಿನ ಜಲಾಲಪುರ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಬುಧವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಅಣ್ಣಾಸಾಹೇಬ ಹೆರವಾಡೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ.ಎಸ್.ಕಾಂಬಳೆ ಘೋಷಿಸಿದರು.

ವಿಲಾಸ ಹೆರವಾಡೆ ಅವರ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ (ವಾರ್ಡ್ ನಂ.೧) ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಣ್ಣಾಸಾಹೇಬ ಹೆರವಾಡೆ ಅವರನ್ನು ಅವಿರೋಧ ಆಯ್ಕೆಮಾಡಲಾಯಿತು. ಬಳಿಕ ಅಣ್ಣಾಸಾಹೇಬ ಹೆರವಾಡೆ ಅವರನ್ನು ಸನ್ಮಾನಿಸಲಾಯಿತು.

ಪಿಡಿಒ ರವಿಕುಮಾರ ಮಠಪತಿ, ಉಪಾಧ್ಯಕ್ಷ ಮೌಲಾ ನದಾಫ್, ನಾಮದೇವ ಕಾಂಬಳೆ, ರಘುನಾಥ ಶೆಲಾರ, ಜಗದೀಶ ಪವಾರ, ಬಸು ಅವ್ವನ್ನವರ, ರಘು ಹೆರವಾಡೆ, ಪಾಂಡು ಹವಾಲ್ದಾರ, ರಾಜು ಕಾಳೆ, ಅಭಿಜಿತ ಹೆರವಾಡೆ, ಗುರು ಹಿಡಕಲ, ರಾಜು ಶೇಲಾರ, ವಿಫುಲ ಹೆರವಾಡೆ, ಗೋವಿಂದ ಭಜಂತ್ರಿ, ಸಂಜು ಕಾಂಬಳೆ, ಮಾರುತಿ ಪಾಟೀಲ, ರಾಹುಲ ಹೆರವಾಡೆ, ಪುಂಡಲಿಕ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net