ಅಣ್ಣ-ತಮ್ಮನ ಚೆಸ್ ಆಟ

Ganeshothsava
Published on

ಚಿತ್ರದುರ್ಗ: ಗಣೇಶ ಚತುರ್ಥಿ ಅಂಗವಾಗಿ ಜೋಗಿಮಟ್ಟಿ ರಸ್ತೆ ಐದನೇ ತಿರುವಿನ ಮನೆಯೊಂದರಲ್ಲಿ ಅಣ್ಣ-ತಮ್ಮಂದಿರಾದ ಗಣೇಶ, ಸುಬ್ರಮಣ್ಯ ಇಬ್ಬರೂ ಚೆಸ್ ಆಟವಾಡುವ ಮಾದರಿಯಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಹವ್ಯಾಸಿ ಕಲಾವಿದ ಮಹಾಂತೇಶ್ ತ್ರಿವಿಕ್ರಮ ಭವ್ಯ ಮಂಟಪ ಸ್ಥಾಪಿಸಿ, ಅದರೊಳಗೆ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ವಸ್ತ್ರ ಮತ್ತು ಪೇಟಾದಿಂದ ವಿಶೇಷವಾಗಿ ಅಲಂಕರಿಸಿದ್ದು, ಹಲವರ ಗಮನ ಸೆಳೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net