ಅಣಬೆ ಬೇಸಾಯದಿಂದ ಆರ್ಥಿಕ ಪ್ರಗತಿ

TKE musroom
ತರೀಕೆರೆಯಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷೆ ಸಲ್ಮಾ ಪರ್ವೀನ್ ಉದ್ಘಾಟಿಸಿದರು. ಮೋಹನ್, ಸಂತೋಷ್, ಸಿದ್ದಯ್ಯ ಇತರರಿದ್ದರು.
Published on

ತರೀಕೆರೆ: ಕಡಿಮೆ ಖರ್ಚಿನ ಅಣಬೆ ಬೇಸಾಯ ಕೈಗೊಂಡು ಹೆಚ್ಚಿನ ಲಾಭಗಳಿಸಬೇಕು ಎಂದು ಅಣಬೆ ಬೇಸಾಯಗಾರ ಮೋಹನ್ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನಿಂದ ಕೃಷಿ ವಿಸ್ತರಣಾ ಕಾರ್ಯಕ್ರಮದ ಪ್ರಯುಕ್ತ ಅಣಬೆ ಕೃಷಿ ಹಾಗೂ ಕೃಷಿ ಸ್ವ ಉದ್ಯೋಗ ಕುರಿತು ಏರ್ಪಡಿಸಿದ್ದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಅಣಬೆ ಆರೋಗ್ಯಕರ ಆಹಾರ. ಎಲ್ಲ ವಯೋಮಾನದವರ ಸೇವನೆಗೂ ಪೂರಕ. ಇದರಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಮತ್ತು ಖನಿಜಾಂಶ ಹೇರಳವಾಗಿ ಸಿಗಲಿದೆ ಎಂದರು.

ಅಣಬೆ ಬೇಸಾಯ ಮಾಡುವವರು ಮಂದ ಬೆಳಕಿನ ಪ್ರದೇಶ ಆಯ್ಕೆ ಮಾಡಿಕೊಳ್ಳಬೇಕು. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಬಿಡುವಿನ ವೇಳೆಯಲ್ಲಿ ಕೈಗೊಳ್ಳಬಹುದಾದ ಬೇಸಾಯದಲ್ಲಿ ವಿವಿಧ ನಿಯಮ ಪಾಲಿಸಿ ದಿನದಲ್ಲಿ ಒಂದು ಸಾವಿರ ರೂಪಾಯಿಗೂ ಅಧಿಕ ಹಣ ಸಂಪಾದಿಸಬಹುದು ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷೆ ಸಲ್ಮಾ ಪರ್ವೀನ್ ಮಾತನಾಡಿ, ಯೋಜನೆಯಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪೂರಕವಾದ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಮಹಿಳೆಯರು ಸಂಘದಿಂದ ಸಿಗುವ ಸೌಲಭ್ಯ ಪಡೆದು ಪ್ರಗತಿ ಸಾಧಿಸಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಕೃಷಿ ಮೇಲ್ವಿಚಾರಕ ಸಂತೋಷ್, ವಲಯ ಮೇಲ್ವಿಚಾರಕ ಸಿದ್ದಯ್ಯ, ಸೇವಾ ಪ್ರತಿನಿಧಿ ವಿದ್ಯಾ, ಸಂಘದ ಸದಸ್ಯೆ ವನಜಾಕ್ಷಿ, ಕೃಷಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net