ಅಣತಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ANATHI
Published on

ಬಾಗೂರು: ಹೋಬಳಿಯ ಅಣತಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎ.ಡಿ.ಶಿವೇಗೌಡ, ಉಪಾಧ್ಯಕ್ಷೆಯಾಗಿ ಲಕ್ಷ್ಮಮ್ಮ ತಿಮ್ಮಾಬೋಯಿ ಅವಿರೋಧವಾಗಿ ಆಯ್ಕೆಯಾದರು.


ಮಂಗಳವಾರ ಗ್ರಾಪಂ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಿತು. ಎ.ಡಿ.ಶಿವೇಗೌಡ, ಹಾಗೂ ಲಕ್ಷ್ಮಮ್ಮ ಹೊರೆತುಪಡಿಸಿ ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಿಸಲಾಯಿತು.
ಪಂಚಾಯಿತಿಯಲ್ಲಿ 14 ಸದಸ್ಯರಿದ್ದು, 14 ಸದಸ್ಯರು ಚುನಾವಣಾ ಪ್ರಕ್ರಿಯೆ ಸಮಯದಲ್ಲಿ ಹಾಜರಿದ್ದರು. ಸಹಾಯಕ ಇಂಜಿನಿಯರ್ ನಳಿನಿ ಕುಮಾರಿ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಜೆಡಿಎಸ್ ಮುಖಂಡರಾದ ಶ್ರೀಧರ್, ಧರ್ಮೇಗೌಡ, ರಾಮಚಂದ್ರ, ಸತೀಶ್, ವಳಗೇರಳ್ಳಿ ಮಂಜುನಾಥ್, ಕೆಂಪೇಗೌಡ, ಎ.ಎಸ್. ಕೃಷ್ಣ, ಕೋಡಿಹಳ್ಳಿ ನಾಗೇಶ್, ಬೋರೇಗೌಡ, ಕುಳ್ಳೇಗೌಡ, ನಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net