ಅಡ್ಡಂಡ ಕಾರ್ಯಪ್ಪ ವಜಾಕ್ಕೆ ಆಗ್ರಹಿಸಿ ಪತ್ರ ಚಳವಳಿ

30
Published on

ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ವಿರುದ್ಧ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಲಘುವಾಗಿ ಮಾತನಾಡಿದ್ದು, ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ಶನಿವಾರ ಅಂಚೆ ಪತ್ರ ಚಳವಳಿ ನಡೆಯಿತು.
ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯಿಂದ ಕಾರ್ಯಪ್ಪ ಅವರನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ನಗರಪಾಲಿಕೆ ಮುಂಭಾಗ ಇರುವ ಅಂಚೆ ಡಬ್ಬಕ್ಕೆ ಪತ್ರ ಹಾಕಲಾಯಿತು.
ಕಲೆ, ಸಾಹಿತ್ಯ, ಸಂಸ್ಕೃತಿಗೆ ಪೂರಕವಾಗಿ ಇರಬೇಕಾದ ರಂಗಾಯಣವನ್ನು ಅಡ್ಡಂಡ ಕಾರ್ಯಪ್ಪ ಒಂದು ಧರ್ಮ, ಕೋಮಿಗೆ ಸೀಮಿತವಾಗುವಂತೆ ನಡೆದುಕೊಳ್ಳುತ್ತಿದ್ದಾರೆ. ವಿಕೃತ ಮನಸ್ಥಿತಿಯಲ್ಲಿ ರಚಿಸಿರುವ ಟಿಪ್ಪು ನಾಟಕದ ಬಗ್ಗೆ ಆಕ್ಷೇಪ ಮಾಡಿದ ಎಚ್.ವಿಶ್ವನಾಥ್ ಅವರನ್ನೇ ಲಘುವಾಗಿ ಟೀಕಿಸಿದ್ದಾರೆ ಎಂದು ದೂರಿದರು.
ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ (ಜನ್ನಿ), ವೇದಿಕೆ ಅಧ್ಯಕ್ಷ ಜಾಕೀರ್ ಹುಸೇನ್, ಮುಖಂಡರಾದ ಎ.ಆರ್.ಕಾಂತರಾಜು, ಶಿವಪ್ಪ, ರದಿವುಲ್ಲಾ, ಕಮಲಾ ಅನಂತರಾಮು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net