ಅಡಕೆ ತೋಟದಲ್ಲಿ ಇಬ್ಬರ ಸಾವು

ctd nnnnn
Published on

ಚಿತ್ರದುರ್ಗ:ಹಿರಿಯೂರು ತಾಲೂಕು ಶ್ರವಣಗೆರೆ ಅಡಕೆ ತೋಟದಲ್ಲಿ ಇಬ್ಬರು ವ್ಯಕ್ತಿಗಳು ಶಂಕಾಸ್ಫಾದವಾಗಿ ಮೃತಪಟ್ಟಿದ್ದಾರೆ. ಮಧ್ಯ ಪ್ರದೇಶ ಮೂಲದವರೆನ್ನಲಾದ ಅಂದಾಜು 25 ವರ್ಷ ಹಾಗೂ 35 ವರ್ಷದ ವಯೋಮಿತಿಯ ಇಬ್ಬರ ಶವಗಳು ಪತ್ತೆಯಾಗಿವೆ.
ಧರ್ಮಪುರ-ಕಣಜನಹಳ್ಳಿ ಗ್ರಾಮಗಳ ನಡುವೆ ಇರುವ ಜಯರಾಮಪ್ಪ ಎಂಬುವರಿಗೆ ಸೇರಿದ ಈ ಅಡಕೆ ತೋಟದಲ್ಲಿ ಶವಗಳು ಪತ್ತೆಯಾಗಿದ್ದು, ವಿದ್ಯುತ್‌ಶಾಖ್‌ನಿಂದ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.
ಕೊಡಲಿ,ಗರಗಸ ಮತ್ತಿತರ ಮರ ಕಟಾವು ಆಯುಧಗಳು ದೊರೆತಿವೆ. ಶ್ರೀಗಂಧ ಕಳ್ಳತನ ಅಥವಾ ಪ್ರಾಣಿ,ಪಕ್ಷಿಗಳ ಭೇಟೆಗೆಂದು ಬಂದಂಥ ಸಮ ಯದಲ್ಲಿ ವಿದ್ಯುತ್ ಶಾಕ್ ಹೊಡೆದು ಈ ಅವಘಡ ಸಂಭವಿಸಿರಬಹುದೆಂದು ಸ್ಥಳಕ್ಕೆ ಭೇಟಿ ನೀಡಿರುವ ಅಬ್ಬಿನಹೊಳೆ ಪೊಲೀಸರು ಶಂಕಿಸಿದ್ದಾರೆ. ತನಿಖೆ ಮುಂದುವರಿಸಿದ್ದು,ಮೃತರ ವಿಳಾಸ ಪತ್ತೆ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net