ಅಡಕೆ ಗಿಡಗಳನ್ನು ಕಡಿದು ದುಷ್ಕ್ರತ್ಯ - ಮುದಹದಡಿ ಗ್ರಾಮದಲ್ಲಿ ಘಟನೆ

IMG-20230806-WA0027.jpg
Published on

ದಾವಣಗೆರೆ: ತಾಲ್ಲೂಕಿನ ಮುದಹದಡಿ ಗ್ರಾಮದ ರೈತ ದರಿಯಪ್ಪರ ಬೀರಪ್ಪ ಅವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ 3 ವರ್ಷದ ಸುಮಾರು 800 ಅಡಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ನಾಶ ಮಾಡಿದ್ದಾರೆ.

ಶನಿವಾರ ಮಧ್ಯರಾತ್ರಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಕಾರಣ ತಿಳಿದುಬರಬೇಕಿದೆ. ತಹಸೀಲ್ದಾರ್ ಡಾ.ಎಂ.ಬಿ.ಅಶ್ವಥ್, ಕಂದಾಯ ನಿರೀಕ್ಷಕ ಬಸವರಾಜು, ತೋಟಗಾರಿಕೆ ಇಲಾಖೆ ಅಧಿಕಾರಿ ಪವನ್ ಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಹದಡಿ ಠಾಣೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸಂಜೀವ್ ರವರು ಪ್ರಕರಣ ದಾಖಲಿಸಿದ್ದಾರೆ, ಶ್ವಾನದಳ ಮೂಲಕ ತನಿಖೆ ನಡೆಸಲಾಯಿತು.

ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಶಿಕ್ಷಿಸಬೇಕು. ಇಂತಹ ದುಷ್ಕೃತ್ಯ ಮುಂದೆಂದೂ ನಡೆಯದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನಷ್ಟಕ್ಕೊಳಗಾದ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಹದಡಿ ಜಿ ಸಿ ನಿಂಗಪ್ಪ, ಆರನೇಕಲ್ಲು ವಿಜಯಕುಮಾರ ಒತ್ತಾಯಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net