

ಮುಂಡಗೋಡ: ತಾಲೂಕಿನ ನಂದಿಪುರ ಗ್ರಾಮದಲ್ಲಿ ಅಡಕೆ ಮರಗಳನ್ನು ಕತ್ತರಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ ರೈತನಿಗೆ ನ್ಯಾಯ ಒದಗಿಸಿಕೊಡುವಂತೆ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ರೈತ ಮಹಿಳೆ ರತ್ನಾ ಬಸವರಾಜ ಓಣಿಕೇರಿ ಅವರು ತಾಲೂಕಿನ ಶಿಂಗ್ನಳ್ಳಿ ಗ್ರಾಮದಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಕಳೆದ ಮೂರುವರ್ಷಗಳ ಹಿಂದೆ ಅಡಕೆ ಸಸಿ ನಾಟಿ ಮಾಡಿದ್ದರು. ಆದರೆ ಮೇ 7ರಂದು ಯಾರೊ ದುರುಳರು ಅಡಕೆ ತೋಟಕ್ಕೆ ನುಗ್ಗಿ 240ಅಡಕೆ ಮರಗಳನ್ನು ಕತ್ತರಿಸಿ ಕ್ರೌರ್ಯ ಮೆರೆದಿದ್ದಾರೆ. ಈ ಕುರಿತು ಪೊಲೀಸ್ ದೂರು ದಾಖಲಿಸಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಚಿದಾನಂದ ಹರಿಜನ, ಎಸ್.ಎಸ್. ಪಾಟೀಲ, ಬಸವರಾಜ ಓಣಿಕೇರಿ, ರತ್ನಾ ಓಣಿಕೇರಿ, ಸಂಜು ಕಿತೆಪ್ಪನವರ ಇತರರು ಇದ್ದರು.