ಅಡಕೆ, ಕಾಫಿ ಮರಗಳು ಧರೆಗೆ

12ald 3b WEB
Published on

ಆಲ್ದೂರು: ಸಮೀಪದ ಚಿಕ್ಕಮಾಗರವಳ್ಳಿ ಗ್ರಾಮದಲ್ಲಿ ಭೂ ಕುಸಿತವಾಗಿ ಲೋಕೇಗೌಡ ಹಾಗೂ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್ ಅವರ ಕಾಫಿ ತೋಟದಲ್ಲಿ 30 ಅಡಿ ಆಳದ ಕಂದಕ ನಿರ್ವಣವಾಗಿದೆ. ಲೋಕೇಗೌಡ ಅವರ ಕಾಫಿ ತೋಟದಲ್ಲಿ ಅಡಕೆ, ಕಾಫಿ ಗಿಡಗಳು ಬುಡಸಮೇತ ಕಿತ್ತು ಪಕ್ಕದ ಗದ್ದೆಗೆ ಜಾರಿವೆ. ಪಕ್ಕದಲ್ಲೇ ಅವರ ಮನೆ ಇರುವುದರಿಂದ ಭೂ ಕುಸಿತದಿಂದ ಮನೆಯವರಲ್ಲಿ ಆತಂಕ ಮನೆ ಮಾಡಿದೆ. ಪಕ್ಕದ ಸಾರ್ವಜನಿಕ ರಸ್ತೆ ಬಿರುಕುಬಿಟ್ಟಿದ್ದು 4-5 ಗ್ರಾಮಗಳ ಸಂಪರ್ಕ ಕಡಿತವಾಗುವ ಭೀತಿ ಉಂಟಾಗಿದೆ.

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಭಾರಿ ಮಳೆಯಿಂದ ಈ ಅವಘಡ ಸಂಭವಿಸಿದೆ. ರಸ್ತೆಯೂ ಬಿರುಕು ಬಿಟ್ಟಿದ್ದು ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕಿದೆ. ರಸ್ತೆ ಪಕ್ಕದಲ್ಲಿ ತಡೆಗೋಡೆ ಅಗತ್ಯವಿದೆ. ಲೋಕೋಪಯೋಗಿ ಇಲಾಖೆ ಎಇಇ ಗವಿರಂಗಪ್ಪ ಭೇಟಿ ನೀಡಿ ಪರಿಶೀಲಿಸಿದ್ದು, ರಸ್ತೆ ದುರಸ್ತಿಪಡಿಸುವ ಕುರಿತು ಜಿಲ್ಲಾಧಿಕಾರಿ ಜತೆ ರ್ಚಚಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net