

ಚಿಕ್ಕಮಗಳೂರು: ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ತಡೆ ಕಾಯಿದೆಯನ್ನು(ಅಟ್ರಾಸಿಟಿ) ದುರುಪಯೋಗಪಡಿಸಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಸಂದೀಪ್ ಹರವಿನಗಂಡಿ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅಂಶದೊAದಿಗೆ ಸಮಸಮಾಜವನ್ನು ನಿರ್ಮಾಣಮಾಡುವ ಉz್ದೆÃಶದಿಂದ ಕೆಲವು ಕಾಯಿದೆಗಳನ್ನು ಜಾರಿಮಾಡಲಾಗಿದೆ. ಅದರಂತೆ ದೌಜನ್ಯಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಒದಗಿಸುವ ಉz್ದÉÃಶದಿಂದ ಅಸ್ಪೃಶ್ಯತೆ ನಿಷೇಧಿಸಿದ್ದು, ಅದರ ಭಾಗವಾಗಿ ಅನುಸೂಚಿತ ಜಾತಿಗಳ ದೌರ್ಜನ್ಯ ತಡೆ ಕಾಯಿದೆ ಜಾರಿಗೆ ತರಲಾಗಿದೆ. ಇದು ಸಾಮರಸ್ಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಇಂತಹ ಕಾಯಿದೆಗಳ ಜಾರಿಗಾಗಿ ೧೯೮೦ ರ ದಶಕದಲ್ಲಿ ಸ್ಥಾಪನೆಗೊಂಡ ದಲಿತ ಸಂಘರ್ಷ ಸಮಿತಿ ಸರ್ಕಾರದ ಗಮನ ಸೆಳೆದು ಶಿಕ್ಷಣ, ಆರೋಗ್ಯ, ಭೂಮಿ ಮತ್ತಿತರೆ ವಿಚಾರಗಳಲ್ಲಿ ವಿಶೇಷ ಕಾಳಜಿ ವಹಿಸಿತ್ತು. ನೊಂದAತಹ ಜನರಿಗೆ ನ್ಯಾಯವನ್ನೂ ಒದಗಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ದಲಿತಪರ ಸಂಘಟನೆಗಳು ಸದುz್ದÉÃಶದಿಂದ ಜಾರಿಯಾದ ಅಟ್ರಾಸಿಟಿ ಕಾಯಿದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಯಾವುದೇ ದೌರ್ಜನ್ಯ ಪ್ರಕರಣಗಳು ನಡೆಯದಿದ್ದರೂ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಮತ್ತು ಪೊಲೀಸ್ ಇಲಾಖೆಗೆ ಸಂಘಟನೆ ಹೆಸರು ಬಳಸಿಕೊಂಡು ಒತ್ತಡ ಹೇರುವುದು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರನ್ನು ಅಟ್ರಾಸಿಟಿ ಕಾಯಿದೆ ಅಡಿ ಪ್ರಕರಣ ದಾಖಲಿಸುತ್ತೇವೆ ಎಂದು ಬೆದರಿಸುವುದು ನಡೆಯುತ್ತಿವೆ. ಇತ್ತೀಚೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೌಕರರ ಮೇಲೆ ಕೇಸು ದಾಖಲಿಸಿರುವುದು ಇಡೀ ವಿದ್ಯಾರ್ಥಿನಿಲಯದ ವಾತವರಣವನ್ನೇ ಕಲುಷಿತಗೊಳಿಸುವಂತಾಗಿದೆ ಎಂದರು.
ಮಲ್ಲAದೂರು ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿರುವ ಅಟ್ರಾಸಿಟಿ ಕೇಸೊಂದು ಕೆಲವು ದಲಿತ ಸಂಘಟನೆಗಳ ಪ್ರಚೋದನೆಯಿಂದ ಆಗಿದೆ. ಇಂತಹ ಘಟನೆಗಳಿಂದ ಸಮುದಾಯಗಳಲ್ಲಿ ಅಶಾಂತಿ ಉಂಟುಮಾಡುವ ಜತೆಗೆ ದ್ವೇಷದ ಭಾವನೆ ಮೂಡಿಸುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಎಲ್ಲರಲ್ಲೂ ಭ್ರಾತೃತ್ವ ಭಾವನೆ ಮೂಡಿಸಿ ಸಮಸಮಾಜ ನಿರ್ಮಾಣ ಮಾಡುವ ಉz್ದÉÃಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಬ್ರಿಜೇಶ್‌ಗೌಡ, ಪೂರ್ಣಿಮಾ ಸುಧೀರ್, ಯತೀಶ್, ವಕೀಲ ದೀಪಕ್, ಸಂತೋಷ್ ಉಪಸ್ಥಿತರಿದ್ದರು.