

ನಾಪೋಕ್ಲು : ಚೆರಿಯಪರಂಬುವಿನ ಜನರಲ್ ಕೆ. ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಗುರುವಾರದ ಪಂದ್ಯಗಳಲ್ಲಿ ಅಟ್ರಂಗಡ , ಮಾಳೇಟಿರ ಚೆಕ್ಕೆರ ಮಂಡ್ಗೊಂಡ ತಂಡಗಳು ಮುನ್ನಡೆ ಸಾಧಿಸಿದವು.
ಅಟ್ರಂಗಡ ತಂಡದ ವಿರುದ್ಧ ಕುಲ್ಲೇಟಿರ ತಂಡ ಐದು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿತು. ರನ್ ಬೆನ್ನಟ್ಟಿ ಆಡಿದ ಅಟ್ರಂಗಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿ ಗೆಲುವು ಸಾಧಿಸಿತು. ಮಾಳೆಟಿರ ತಂಡದ ವಿರುದ್ಧ ಬಲ್ಲಚಂಡ ಎರಡು ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದರೆ ಮಾಳೆಟಿರ ತಂಡ ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿ ಗೆಲುವು ಸಾಧಿಸಿತು.
ಕಳಕಂಡ ತಂಡದ ವಿರುದ್ಧ ಚೆಕ್ಕೆರ ಮೂರು ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿತು. ಉತ್ತರವಾಗಿ ಆಡಿದ ಕಳಕಂಡ ತಂಡ 10 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿ ಸೋಲು ಅನುಭವಿಸಿತು. ಮುಂದಿನ ಪಂದ್ಯದಲ್ಲಿ ಮಂಡುವಂಡವಿರುದ್ಧ ನೆರವಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತು. ಮಂಡುವಂಡ ತಂಡ ಒಂದು ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿ ಗೆಲುವು ಸಾಧಿಸಿತು.
ಇಂದಿನ ಪಂದ್ಯ: ಶುಕ್ರವಾರ ಅಟ್ರಂಗಡ ಮತ್ತು ಮಾಲೀಟರ ತಂಡಗಳ ನಡುವೆ ಹಾಗೂ ಚೆಕ್ಕೆರ ಮತ್ತು ಮಂಡುವಂಡ ತಂಡಗಳ ನಡುವೆ ಸೆಮಿ ಫೈನಲ್ಸ್ ಪಂದ್ಯಗಳು ನಡೆಯಲಿದೆ.