ಅಟಲ್​ ಜನ್ಮಶತಮಾನೋತ್ಸವ ಮಾ.15ರವರೆಗೆ

Rajkumar patil telkur
Published on

ಕಲಬುರಗಿ: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ಅಟಲ್ ಸ್ಮÊತಿ ಸಂಕಲನ ಮತ್ತು ಪ್ರಚಾರ ಅಭಿಯಾನ ನಿಮಿತ್ತ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಬಿಜೆಪಿ ವಕ್ತಾರ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು.

ಜ.೧೪ರಿಂದ ಫೆ.೧೪ರವರೆಗೆ ಅಟಲ್ ಸ್ಮÊತಿ ಸಂಕಲನ ಮತ್ತು ಪ್ರಚಾರ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈಗಾಗಲೇ ಜಿಲ್ಲಾವಾರು ಪದಾಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಮಂಡಲ ಅಧ್ಯಕ್ಷರು, ಇಬ್ಬರು ಸದಸ್ಯರು ಸಮಿತಿಯಲ್ಲಿದ್ದಾರೆ. ಅಟಲ್ ಜಿ ಅವರಿಗೆ ಸಂಬAಧಿಸಿದ ಫೋಟೋ, ವಿಡಿಯೋ, ಭಾಷಣಗಳು ಹಾಗೂ ಪ್ರೇರಣೆಯ ಅನುಭವಗಳ ಸಂಕಲನವನ್ನು ಜಿಲ್ಲಾ ಸಮಿತಿ ಸಂಗ್ರಹಿಸಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಟಲ್ ಅವರ ಜತೆ ಕಾರ್ಯನಿರ್ವಹಿಸಿದ ಹಿರಿಯ ಮಾಹಿತಿ ಸಂಗ್ರಹ, ಸನ್ಮಾನ ಆಯೋಜಿಸಲಾಗುತ್ತಿದೆ. ವಾಜಪೇಯಿ ಬಗ್ಗೆ ಬರೆದ ಲೇಖನ, ಪುಸ್ತಕಗಳ ಸಂಗ್ರಹ ಪಟ್ಟಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಫೆ.೧೫ರಿಂದ ಮಾರ್ಚ್ ೧೫ರವರೆಗೆ ಅಟಲ್ ವಿರಾಸತ್ ಸಮ್ಮೇಳನಗಳನ್ನು ಪ್ರತಿ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತದೆ. ಸಮ್ಮೇಳನಕ್ಕೆ ವಿಚಾರವಾದಿಗಳು, ಗಣ್ಯರನ್ನು ಆಹ್ವಾನಿಸಲಾಗುವುದು. ಅಟಲ್ ವ್ಯಕ್ತಿತ್ವ, ಕೃತಿಗಳ, ಪುಸ್ತಕ, ಲೇಖನಗಳ ಲೇಖಕರನ್ನು ಸನ್ಮಾನಿಸಿ, ಗೌರವಿಸಲಾಗುವುದು. ಅವರ ಅಧಿಕಾರವಧಿಯಲ್ಲಿನ ವಿಶೇಷ ಸಾಧನೆ ಮತ್ತು ಯೋಜನೆಗಳ ಮಾಹಿತಿ ಒಳಗೊಂಡ ಪಿಪಿಟಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ಅಟಲ್ ಜನ್ಮಶತಮಾನೋತ್ಸವಕ್ಕೆ ಡಾ.ಎ.ಎಚ್.ಶಿವಯೋಗಿಸ್ವಾಮಿ ನೇತೃತ್ವದಲ್ಲಿ ಜಗದೀಶ ಹಿರೇಮನಿ ಸಂಚಾಲಕತ್ವದಲ್ಲಿ ೧೨ ಜನರ ತಂಡ ರಚಿಸಿದ್ದು, ವಿಭಾಗೀಯ ಸಂಯೋಜಕರಾಗಿ ದಯಾಘನ್ ಧಾರವಾಡಕರ್ ನಿರ್ವಹಣೆ ಮಾಡಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಿವಯೋಗಿ ನಾಗನಳ್ಳಿ, ಸಂತೋಷ ಹಾದಿಮನಿ ಇತರರಿದ್ದರು.

ರಾಜಕೀಯವನ್ನು ಮೀರಿ ಬೆಳೆದ ವ್ಯಕ್ತಿತ್ವ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ, ವ್ಯಕ್ತಿತ್ವ ಪ್ರಸ್ತುತ ರಾಜಕಾರಣಿಗಳಿಗೆ, ಪೀಳಿಗೆಗೆ ತಿಳಿಸುವುದು ಅವಶ್ಯ. ಜನ್ಮಶತಮಾನೋತ್ಸವ ನಿಮಿತ್ತ ಅಟಲ್‌ರ ವ್ಯಕ್ತಿತ್ವ, ಅಜಾತಶತ್ರು ರಾಜಕಾರಣವನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು.

| ಅಮರನಾಥ ಪಾಟೀಲ್

ಮಾಜಿ ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net