ಅಜ್ಞಾನ ಕಳೆಯುವ ಸುತ್ತೂರು ಶ್ರೀಕ್ಷೇತ್ರ

19blrp1.
Published on

ಹಾಸನ : ಅಜ್ಞಾನದ ಕತ್ತಲು ಕಳೆದು ಸುಜ್ಞಾನದ ಬೀಜ ಬಿತ್ತುವ ಮೂಲಕ ಸುತ್ತೂರು ಶ್ರೀಕ್ಷೇತ್ರ ನಾಡಿನ ಮನೆ ಮಾತಾಗಿದೆ ಎಂದು ತಹಸೀಲ್ದಾರ್ ವಿಭಾ ವಿ.ರಾಥೋಡ್ ಹೇಳಿದರು.
ಶ್ರೀಕ್ಷೇತ್ರ ಸುತ್ತೂರಿನಲ್ಲಿ ಜ.18ರಿಂದ 23ರವರೆಗೆ ಐದು ದಿನ ನಡೆಯುವ ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಅರಸೀಕೆರೆ ತಾಲೂಕು ಕಚೇರಿ ಬಳಿ ಬೀಳ್ಕೊಟ್ಟು ಮಾತನಾಡಿ, ಬಡವರ್ಗದ ಸಹಸ್ರಾರು ವಿದ್ಯಾರ್ಥಿಗಳಿಗೆ ಶ್ರೀ ಮಠ ಶಿಕ್ಷಣ, ಊಟ, ವಸತಿ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದೆ. ಅಂತಹ ಪುಣ್ಯಭೂಮಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದರು.
ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಮಾತನಾಡಿ, ಸುತ್ತೂರಲ್ಲಿ ಐದು ದಿನಗಳು ನಡೆಯುವ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಬಣ್ಣಿಸಿದರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್ ಮಾತನಾಡಿದರು. ಮುಖಂಡರಾದ ಅಣ್ಣಾಯ್ಕನಹಳ್ಳಿ ವಿಜಯಕುಮಾರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ನಿರ್ದೇಶಕಿ ಜಯಪದ್ಮಾ, ಪ್ರಾಂಶುಪಾಲರಾದ ತೀರ್ಥಪ್ರಸಾದ್, ಕೆ.ಎಸ್.ಮಂಜುನಾಥ್, ಕೆಂಕೆರೆಹಳ್ಳಿ ಪ್ರಕಾಶ್, ಮುಖ್ಯಶಿಕ್ಷಕ ಅರುಣ್‌ಕುಮಾರ್, ಡಾ.ಹರೀಶ್ ಕುಮಾರ್ ಸೇರಿ ಜ್ಞಾನಶ್ರೀ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net