ಅಜ್ಜಪ್ಪ, ಪಾಷಾಣಮೂರ್ತಿಗೆ ಪೂಜೆ

19SPT01
Published on

ಸೋಮವಾರಪೇಟೆ: ತಾಲೂಕಿನ ಗಣಗೂರು ಗ್ರಾಮದ ಅಜ್ಜಪ್ಪ ಮತ್ತು ಪಾಷಾಣಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿದವು.
ತುಳುನಾಡು ಸಂಪ್ರದಾಯದಂತೆ ನಡೆದ ಉತ್ಸವದಲ್ಲಿ ಗ್ರಾಮದ ಸುತ್ತಮುತ್ತಲಿನ ಜನ ಸೇರಿದ್ದರು. ಅಜ್ಜಪ್ಪ, ಪಾಷಾಣಮೂರ್ತಿಯಲ್ಲಿ ಕಷ್ಟ ಕಾರ್ಪಣ್ಯ ನೀಗಿಸುವಂತೆ ಭಕ್ತರು ಪ್ರಾರ್ಥಿಸಿದರು. ಗ್ರಾಮಗಳ ಸುಭಿಕ್ಷೆಗಾಗಿ, ಮಳೆ, ಬೆಳೆ ಸಮೃದ್ಧಿಗಾಗಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಎರಡು ದಿನಗಳ ಕಾಲ ನಡೆದ ಪೂಜಾ ಉತ್ಸವದಲ್ಲಿ ಗಂಗಾ ಪೂಜೆ, ಕಳಸ ಪೂಜೆ, ಸುಗ್ಗಿ ಕುಣಿತ ಸೇರಿದಂತೆ ಸಾಂಪ್ರದಾಯಿಕ ಪೂಜಾ ಕಾರ್ಯ ನಡೆದವು. ಅಡ್ಡೆ ಹೊತ್ತು ಗ್ರಾಮದಲ್ಲಿ ಪ್ರದಕ್ಷಿಣೆ ಹಾಕಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net