

ಚಿತ್ರದುರ್ಗ: ಸಾಲ ಮರಳಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಅಜ್ಜನನ್ನೇ ಹತ್ಯೆಗೈದಿದ್ದ ಮೊಮ್ಮಗನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ. ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಎಸ್.ಚಿತ್ರಲಿಂಗಪ್ಪ ಶಿಕ್ಷೆಗೊಳಗಾದ ಅಪರಾ ಧಿ.
ಈತ ತನ್ನ ಅಜ್ಜ ಈಶ್ವರಪ್ಪ ಅವರ ಬಳಿ 3 ಲಕ್ಷ ರೂ.ಸಾಲ ಪಡೆದಿದ್ದು,ಇದರಲ್ಲಿ 75 ಸಾವಿರ ರೂ.ಹಿಂತಿರುಗಿಸಿದ್ದ.ಚಿತ್ರಹಳ್ಳಿ ಪೆಟ್ರೋಲ್ ಬಂಕ್ ಸಮೀಪದಲ್ಲಿದ್ದ ಒಂದೂವರೆ ಎಕರೆ ಜಮೀನು ಸರಿ ಇಲ್ಲ,ಅದನ್ನು ಮಾರಾಟ ಮಾಡಿ ಬಿಡು ಎಂದು ಈಶ್ವರಪ್ಪ, ಕಡಿಮೆ ಬೆಲೆಗೆ ಚಿತ್ರಲಿಂಗಪ್ಪ ನಿಂದ ಮಾರಾಟ ಮಾಡಿಸಿದ್ದರು.
ಇದರಿಂದಾಗಿ ಅಜ್ಜ-ಮೊಮ್ಮಗನ ನಡುವೆ ಗಲಾಟೆಯಾಗಿದ್ದು,ಈಶ್ವರಪ್ಪ ತನ್ನ ಸಾಲವನ್ನು ಹಿಂತಿರುಗಿಸುವಂತೆ ಚಿತ್ರಲಿಂಗಪ್ಪಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ 2022 ಜುಲೈ 9ರಂದು ಚಿತ್ರಲಿಂಗಪ್ಪ,ಈಶ್ವರಪ್ಪನನ್ನು ಅರಸನಘಟ್ಟ ಸಮೀಪದ ಹನುಮಂತದೇವರ ಕಣಿವೆ ಬಳಿ ದೊಣ್ಣೆಯಿಂ ದ ಹೊಡೆದು,ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ.
ಪ್ರಕರಣದ ತನಿಖೆ ನಡೆಸಿದ್ದ ಹೊಳಲ್ಕೆರೆ ಸಿಪಿಐ ಕೆ.ಎಸ್.ರವೀಶ್ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್‌ವಾಸುದೇವ ಅವರು,ಅಪರಾಧಿಗೆ ಜೀವಾವಧಿ ಶಿಕ್ಷೆ, 1ಲಕ್ಷ ರೂ.ದಂಡ,ದಂಡ ಕಟ್ಟಲು ವಿಫಲವಾದಲ್ಲಿ 6 ತಿಂಗಳ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಹಣದಲ್ಲಿ 75 ಸಾವಿರ ರೂ.ಗಳನ್ನು ಪಿರ‌್ಯಾದಿ ಶಂಕರ್‌ಗೆ ನೀಡುವಂತೆ ಹಾಗೂ 25 ಸಾವಿರ ರೂ.ಗಳನ್ನು ಸರಕಾರಕ್ಕೆ ಜಮೆ ಮಾಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರಕಾರಿ ಅಭಿಯೋಜಕ ಎನ್.ಎಸ್.ಮಲ್ಲಯ್ಯ ವಾದಿಸಿದ್ದರು.ಬಿ.ಗಣೇಶ್ ನಾಯ್ಕ ಪ್ರಕರಣದ ವಿಚಾರಣೆ ನಡೆಸಿದ್ದರು.