ಅಗ್ನಿಹೋತ್ರದೊಂದಿಗೆ ಗುರುಪೂರ್ಣಿಮೆ ಆಚರಣೆ

h3-agnihotra
Published on

ಹುಬ್ಬಳ್ಳಿ: ಪತಂಜಲಿ ಯೋಗ ಸಮಿತಿ ವತಿಯಿಂದ ಹುಬ್ಬಳ್ಳಿಯ ಚೈತನ್ಯನಗರ ಗಾರ್ಡನ್​ನಲ್ಲಿ ಅಗ್ನಿಹೋತ್ರದ ಮೂಲಕ ಸೋಮವಾರ ಗುರುಪೂರ್ಣಿಮೆ ಆಚರಿಸಲಾಯಿತು.

ಬೆಳಗ್ಗೆ 1 ತಾಸು ಯೋಗಾಭ್ಯಾಸ ಮಾಡಿ, ಪತಂಜಲಿ ಯೋಗ ಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಯೋಗ ಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ ಪವಿತ್ರ ಅಗ್ನಿಹೋತ್ರ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಭವರಲಾಲ್ ಆರ್ಯ ಅವರು, ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿನಿತ್ಯದ ಕಾಯಕವಾಗಬೇಕು. ದಿನದ 24 ಗಂಟೆಯಲ್ಲಿ 1 ಗಂಟೆ ಯೋಗಕ್ಕೆ ಮೀಸಲಿಡಿ. ಅಗ್ನಿಹೋತ್ರ ಅಭ್ಯಾಸದಿಂದ ವಾತಾವರಣ ಶುದ್ಧವಾಗಿ ಜನರ ಆರೋಗ್ಯ ವೃದ್ಧಿಯಾಗುತ್ತದೆ. ಅಗ್ನಿಹೋತ್ರವು ಸರಳವಾದ ಎಲ್ಲರೂ ಅನುಸರಿಸಬಹುದಾದ ಅಭ್ಯಾಸವಾಗಿದೆ ಎಂದು ತಿಳಿಸಿದರು.

ಯೋಗ ಸಾಧಕರಿಂದ ಹಿರಿಯ ಯೋಗ ಗುರುಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಪೌಷ್ಟಿಕಾಂಶಯುಕ್ತ ಸಿಹಿ ವಿತರಿಸಲಾಯಿತು. ಪತಂಜಲಿ ಯೋಗಪೀಠದ ಕರ್ನಾಟಕ ರಾಜ್ಯ ಸಹ ಪ್ರಭಾರಿ ಶರಣಪ್ಪ , ಮೀನಾಕ್ಷಿ, ಮಹೇಶ ಕೊಟ್ಟಿಗೆರಿ, ನೀಲಾ ಹಿರೇಮಠ, ಸುಲೋಚನ ಕುಂಬಾರ, ವೀರೇಶ ಶಿಶುವಿನಹಳ್ಳಿ, ಶಾಲಿನಿ ಪತ್ತಾರ್, ರೂಪ ಛಲವಾದಿ, ನಾಗವೇಣಿ ಕ್ಯಾರಕಟ್ಟಿ, ಪೂರ್ಣಿಮಾ ಹರವಿ, ವಾಮನ ಶಾನಭಾಗ್, ರಮೇಶ ಶೆಟ್ಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net