ಅಗ್ನಿಶಾಮಕ ವೃತ್ತಿಯಲ್ಲಿ ಹಲವು ಸವಾಲುಗಳು

DEC. 31, HNP., PH..2.
Published on

ಹೊಳೆನರಸೀಪುರ: ಅಗ್ನಿಶಾಮಕ ಸಿಬ್ಬಂದಿ ಕಾರ್ಯ ಬಹಳ ಜವಾಬ್ದಾರಿಯುತವಾದದ್ದು. ಕರ್ತವ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಆತ್ಮವಿಶ್ವಾಸ ಹಾಗೂ ಜಾಗ್ರತೆ ವಹಿಸಬೇಕು ಎಂದು ಅಗ್ನಿಶಾಮಕ ಇಲಾಖೆಯ ನಿವೃತ್ತ ಠಾಣಾಧಿಕಾರಿ ಎನ್.ಕೃಷ್ಣಪ್ಪ ಹೇಳಿದರು.


ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಪಟ್ಟಣದ ಅಗ್ನಿಶಾಮಕ ಠಾಣೆ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಅಗ್ನಿಶಾಮಕ ಸಿಬ್ಬಂದಿ ತರಬೇತಿ ಸಂದರ್ಭದಲ್ಲಿ ನೀಡಿದ ಸಲಹೆ ಮತ್ತು ಮಾರ್ಗದರ್ಶನವನ್ನು ಅರ್ಥೈಸಿಕೊಂಡು ಮುನ್ನಡೆದಾಗ ಯಾವುದೇ ಅಪಾಯವಿಲ್ಲದೆ ಕಾರ್ಯನಿರ್ವಹಿಸಬಹುದು ಎಂದರು.


ಅಗ್ನಿಶಾಮಕ ವೃತ್ತಿಯಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸಂಕಷ್ಟದ ಸಮಯದಲ್ಲಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸೇವಾ ಕಾರ್ಯ ನಮ್ಮದಾಗಿದೆ. ತುರ್ತು ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ಜತೆಗೆ ಉತ್ತಮ ಸಂಬಂಧ ಹಾಗೂ ಕರ್ತವ್ಯದಲ್ಲಿ ನಿಷ್ಠೆ ಅವಶ್ಯಕ ಎಂದು ಹೇಳಿದರು.


ಪ್ರದೀಪ್, ಜನಾರ್ದನ್, ಲಕ್ಷ್ಮೀಪತಿ , ಜಗದೀಶ್, ರಿತೇಶ್, ಮೋಹನ್ ಕುಮಾರ್, ಆನಂದ್, ಜೋಗಿ ಬಸವರಾಜ್, ವಿಷ್ಣು ನಾಯಕ್, ಮರೀಗೌಡ, ಪ್ರದೀಪ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net