ಅಗ್ನಿ ಅವಘಡ,ಒಮ್ನಿ,ದ್ವಿಚಕ್ರವಾಹನಗಳು ಭಸ್ಮ

ctd fire -01
Published on

ಚಿತ್ರದುರ್ಗ: ನಗರದ ಕೋಟೆ ರಸ್ತೆ ಫಿಲ್ಟರ್‌ಹೌಸ್ ಬಳಿ ಮಂಗಳವಾರ ಬೆಳಗ್ಗೆ 11.30ರ ಸಮಯದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂದು ಒಮ್ಮಿ,ಒಂದು ಬೈಕ್ ಹಾಗೂ ಒಂದು ಮೊಪೈಡ್ ಬೆಂಕಿಗೆ ಆಹುತಿಯಾಗಿವೆ.

ಸಿಎನ್‌ಜಿ ಹೊಂದಿದ್ದ ಮಾರುತಿ ಒಮ್ನಿಯಲ್ಲಿ ಕಾಣಿಸಿದ ತಕ್ಷಣವೇ ವ್ಯಾಪಕಗೊಂಡ ಬೆಂಕಿಯಿಂದ ಇತರೆ ಕೆಲವು ವಾಹನಗಳು ಸುಟ್ಟಿವೆ. ಸುದ್ದಿ ತಿಳಿದ ಅಗ್ನಿ ಶಾಮಕದಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ವಾಹನಗಳು ಸುಟ್ಟು ಕರಕಲಾಗಿವೆ.

ಇಸ್ಮಾಯಿಲ್ ಎಂಬುವರಿಗೆ ಸೇರಿದ ಒಮ್ನಿ ಹಾಗೂ ಸಲೀಂ ಎಂಬುವರಿಗೆ ಸೇರಿದ ಬೈಕ್ ಸುಟ್ಟಿವೆ. ಈ ಅವಘಡಕ್ಕೆ ಕಾರಣಗಳ ತನಿಖೆ ನಡೆ ದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಅಧಿಕಾರಿ ಸೋಮಶೇಖರ್ ಅಗಡಿ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net