ಅಗ್ಗುಂದ ಗ್ರಾಮದಲ್ಲಿ ಕರಡಿ ದಾಳಿ

09arsph1ep
Published on

ಅರಸೀಕೆರೆ : ತಾಲೂಕಿನ ಅಗ್ಗುಂದ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ತೋಟಕ್ಕೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ. ಗ್ರಾಪಂ ಸದಸ್ಯ ವೇದಮೂರ್ತಿ ಗಾಯಗೊಂಡವರು. ತೋಟದಲ್ಲಿ ಹಿಂಬದಿಯಿಂದ ಕರಡಿ ದಾಳಿ ನಡೆಸಿದ್ದು, ವೇದಮೂರ್ತಿ ಅವರ ತಲೆ, ಕಿವಿ ಹಾಗೂ ಮುಖವನ್ನು ಕಚ್ಚಿ ಗಾಯಗೊಳಿಸಿದೆ. ಗಾಯಾಳುವಿನ ರೋದನೆ ಆಲಿಸಿದ ಸ್ಥಳೀಯರು ದೌಡಾಯಿಸಿ ಗಾಯಾಳುವನ್ನು ತಕ್ಷಣವೇ ನಗರದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಮಾಹಿತಿ ಸಂಗ್ರಹಿಸಿದ್ದಾರೆ. ಗಾಯಾಳುವಿನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಬೊಮ್ಮೇನಹಳ್ಳಿ ಗ್ರಾಮದ ಶಿವಣ್ಣ ಎನ್ನುವವರ ಮೇಲೆಯೂ ಕರಡಿ ದಾಳಿ ನಡೆಸಿ ಗಾಯಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net