ಅಗ್ಗುಂದ ಗ್ರಾಮದ ಉಡಸಲಮ್ಮ ರಥೋತ್ಸವ

06arsph1ep
Published on

ಅರಸೀಕೆರೆ : ತಾಲೂಕಿನ ಅಗ್ಗುಂದ ಗ್ರಾಮದ ಉಡಸಲಮ್ಮ ದೇವಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಭಾನುವಾರ ಮಧ್ಯಾಹ್ನ ನೆರವೇರಿತು. ಸಂಪ್ರದಾಯದಂತೆ ಗ್ರಾಮದ ಹೊರ ಭಾಗದಲ್ಲಿರುವ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಮುಂಜಾನೆಯಿಂದಲೇ ದೇಗುಲಕ್ಕೆ ಆಗಮಿಸಿದ್ದ ಭಕ್ತರು ದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಉಡಸಲಮ್ಮದೇವಿ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಭಕ್ತರು ಹಣ್ಣು ಧವನ ಎಸೆದು ಭಕ್ತಿ ಸಮರ್ಪಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಾಲಯ ಟ್ರಸ್ಟ್‌ನ ಸದಸ್ಯರು, ಕಾರೇಹಳ್ಳಿ, ಮಾಲೆಕಲ್ ತಿರುಪತಿ, ದುಮ್ಮೇನಹಳ್ಳಿ,ಬಂಡಿಹಳ್ಳಿ, ದಾಸಿಹಳ್ಳಿ, ಬೊಮ್ಮೇನಹಳ್ಳಿ, ಅಮ್ಮನಹಟ್ಟಿ, ಚಂದ್ಲಾಪುರ, ಸಿದ್ದರಹಳ್ಳಿ, ತಾಂಡ್ಯ, ಅಗ್ಗುಂದ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು. ದೇವಲಯ ಸಮಿತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net