ಅಗಸಿಯಲ್ಲಿನ ಸಿಸಿ ರಸ್ತೆ ದುರಸ್ತಿ ಮಾಡಿ

Untitled design(18)
Published on

ಸಿರಿಗೇರಿ: ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಹೊಳಗುಂದಿ ಲಕ್ಷ್ಮೀ ಕೆ.ದ್ಯಾವಣ್ಣ ಮತ್ತು ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲುಗಪ್ಪ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.

ಅಗಸಿಯ ಸಿಸಿ ರಸ್ತೆ ಸರಿಪಡಿಸಬೇಕು. ಸಾರ್ವಜನಿಕರು ನಮಗೆ ಛೀಮಾರಿ ಹಾಕುತ್ತಿದ್ದಾರೆ ಎಂದು ಎನ್.ಹನುಮಂತ ಪಟ್ಟು ಹಿಡಿದರು. ಪಿಡಿಒ ಯು.ರಾಮಪ್ಪ ಮಾತನಾಡಿ, ಇದಕ್ಕೆ ಅನುದಾನ ಹೆಚ್ಚು ಬೇಕು. ಮುಂದಿನ ದಿನಗಳಲ್ಲಿ ಅನುದಾನ ಒದಗಿಸಿ ಸರಿಪಡಿಸುವುದಾಗಿ ಭರವಸೆ ನೀಡಿದರು.

2025-26 ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 63.35 ಲಕ್ಷ ರೂ. ಕ್ರಿಯಾಯೋಜನೆ ತಯಾರಿ ಹಾಗೂ ಸಾರ್ವಜನಿಕ ರುದ್ರಭೂಮಿಯಲ್ಲಿ ಆರ್ಯ ವೈಶ್ಯ ಸಮುದಾಯದವರ ಚಿತೆ ದಹನ ಮಾಡಲು ಸ್ಥಳ ನಿಗದಿ ಮಾಡುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು.

ಸದಸ್ಯರಾದ ಎಸ್.ಎಂ ಅಡಿವೆಯ್ಯ ಸ್ವಾಮಿ, ಗುಡಟ್ಟಿ ಈರಣ್ಣ, ವಿ.ಅನೀಲ್ ಕುಮಾರ್, ಸಲೀಂ, ಕೆ.ಶಿವಪ್ಪ, ಸ್ನೇಹಲತಾ, ಎನ್.ಶಿವಮ್ಮ, ವಿ.ದಾನಮ್ಮ, ಬಶೀರಾ ಬೇಗಂ, ಲಕ್ಷ್ಮೀ, ಗ್ರಾಪಂ ಕಾರ್ಯದರ್ಶಿ ವೀರೇಶ್, ಫಯಾಜ್,ಬಿ. ರುದ್ರೇಶ್, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net