ಅಗಸಿ ಜೀರ್ಣೋದ್ಧಾರಕ್ಕೆ ಕ್ರಮ

05ydg03
Published on

ಯಾದಗಿರಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಮಂಗಳವಾರ ಶಹಾಪುರ ನಗರಕ್ಕೆ ಭೇಟಿ, ತಾಲೂಕಾಸ್ಪತ್ರೆ ಸೇರಿ ವಿವಿಧೆಡೆ ಸುತ್ತಾಟ ನಡೆಸಿದರು.
ಮೊದಲಿಗೆ ನಗರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿನ ವಾರ್ಡ್, ಔಷ ದಾಸ್ತಾನು ಕೋಣೆ ಪರಿಶೀಲನೆ ನಡೆಸಿದರು. ಆಸ್ಪತ್ರೆಗೆ ಬರುವವರು ಬಹುತೇಕರು ಬಡವರಾಗಿರುತ್ತಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡುವುದರ ಜತೆಗೆ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವೈದ್ಯರಿಗೆ ಸಮಾಜದಲ್ಲಿ ಗೌರವಯುತ ಸ್ಥಾನವಿದೆ. ಅದನ್ನು ಕಾಪಾಡುವುದಲ್ಲದೇ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಸಲಹೆ ನೀಡಿದರು.

ನಂತರ ನಗರದ ಪುರಾತನ ಕನ್ಯಾಕೊಳ್ಳುರು ಅಗಸಿಗೆ ಭೇಟಿ ನೀಡಿದರು. ಸತತವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಅಗಸಿ ಕುಸಿದು ಬಿದ್ದಿದ್ದು, ಇಂಥ ಕಟ್ಟಡ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸುವೆ. ಆದಷ್ಟು ಬೇಗ ಈ ಅಗಸಿ ಬಾಗಿಲು ಜೀಣರ್ೋದ್ಧಾರದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದರು.

ಇದೇ ವೇಳೆ ಆದರ್ಶ ವಿದ್ಯಾಲಯಕ್ಕೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಾಲೆಯ ಮೂಲಸೌಲಭ್ಯಗಳು ಹಾಗೂ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದ ಜೈನ್, ಯಾವ ಮಗು ಸಹ ಸೌಲಭ್ಯದಿಂದ ವಂಚಿತರಾಗಬಾರದು. ಶಿಕ್ಷಕರು ನಿಷ್ಠೆ, ಪ್ರಮಾಣಿಕತೆಯಿಂದ ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net