

ಬಸವಕಲ್ಯಾಣ: ಆಂಧ್ರಪ್ರದೇಶದ ಚಿತ್ತೂರ ಬಳಿ ಭಾನುವಾರ ಬೆಳಗ್ಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಶಿವಾಜಿ ನಗರ ಠಾಣೆ ಪಿಎಸ್ಐ ಅವಿನಾಶ ಯಾದವ್ ಅಂತ್ಯಕ್ರಿಯೆ ಸ್ವಗ್ರಾಮ ದಾಸರವಾಡಿಯಲ್ಲಿ ಸಕರ್ಾರಿ ಗೌರವಗಳೊಂದಿಗೆ ಸೋಮವಾರ ನಡೆಯಿತು. ಸಹಸ್ರಾರು ಜನರ ಅಶ್ರುತರ್ಪಣದ ಮಧ್ಯೆ ಅಗಲಿದ ದಕ್ಷ ಅಧಿಕಾರಿಗೆ ಭಾವಪೂರ್ಣ ವಿದಾಯ ಹೇಳಲಾಯಿತು.
ಜಿಲ್ಲಾ ಸಶಸ್ತ್ರ ಪಡೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ಗೌರವ ಸಲ್ಲಿಸಲಾಯಿತು. ಹಾರಕೂಡ ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಶಾಸಕರಾದ ರಾಜಶೇಖರ ಪಾಟೀಲ್, ಶರಣು ಸಲಗರ, ಮಾಜಿ ಎಂಎಲ್ಸಿ ವಿಜಯಸಿಂಗ್ ಸೇರಿದಂತೆ ಪ್ರಮುಖರು, ಅಧಿಕಾರಿಗಳು, ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಈಶಾನ್ಯ ವಲಯ ಐಜಿಪಿ ಮನೀಷ್ ಖಬರ್ಿಕರ್, ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ, ಎಎಸ್ಪಿಗಳಾದ ಶಿವಾಂಶು ರಜಪೂತ್, ಪೃಥ್ವಿಕ್ ಶಂಕರ, ಎಸಿ ರಮೇಶ ಕೋಲಾರ, ತಹಸೀಲ್ದಾರ್ ಸಾವಿತ್ರಿ ಸಲಗರ, ಬೆಂಗಳೂರು ಡಿವೈಎಸ್ಪಿ ವೈಜಿನಾಥ ಸೂರ್ಯವಂಶಿ, ರಘುವೀರಸಿಂಗ್ ಠಾಕೂರ್, ಹುಮನಾಬಾದ್ನ ಶರಣಬಸಪ್ಪ ಕೊಡ್ಲಾ ಗೌರವ ನಮನ ಸಲ್ಲಿಸಿದರು.
ಪ್ರಮುಖರಾದ ಮಾಲಾ ನಾರಾಯಣರಾವ, ಬಾಬು ಹೊನ್ನಾನಾಯಕ, ಅಜರ್ುನ ಕನಕ, ಪ್ರದೀಪ ವಾತಡೆ, ನೀಲಕಂಠ ರಾಠೋಡ್, ಗುಂಡುರೆಡ್ಡಿ, ಅನೀಲ ಭೂಸಾರೆ, ನಿರ್ಮಲಾ ಮಾನೆಗೋಪಾಲೆ, ಕೇಶಪ್ಪ ಬಿರಾದಾರ, ಮನೋಹರ ಮೈಸೆ, ದತ್ತು ಧೂಳೆ ಪಾಟೀಲ್, ಅಮೃತಸಿಂಗ್ ಧಾಮಿ ಇತರರಿದ್ದರು.
ಗಾಂಜಾ ಗ್ಯಾಂಗ್ ಹಿಡಿಯಲು ಹೋಗುತ್ತಿದ್ದಾಗ ಆಂಧ್ರಪ್ರದೇಶದ ಚಿತ್ತೂರ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಿಎಸ್ಐ ಅವಿನಾಶ ಸೇರಿ ಮೂವರು ಮೃತಪಟ್ಟಿದ್ದರು. ಸೋಮವಾರ ಬೆಳಗ್ಗೆ 6ರ ಸುಮಾರಿಗೆ ಪಾಥರ್ಿವ ಶರೀರ ಸ್ವಗ್ರಾಮಕ್ಕೆ ತರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮನ ಕಲಕುವಂತಿತ್ತು. ಅವಿನಾಶ ತಂದೆ ನಿವೃತ್ತ ಪಿಎಸ್ಐ ಕಾಶೀನಾಥ ರೋಳಾ, ತಾಯಿ, ಸಹೋದರ- ಸಹೋದರಿಯರು ಮತ್ತು ಸಂಬಂಧಿಕರು ಪಾಥರ್ಿವ ಶರೀರದ ಬಳಿ ಕುಳಿತು ರೋಧಿಸುತ್ತಿದ್ದ ದೃಶ್ಯ ಎಲ್ಲರ ಹೃದಯಹಿಂಡುತ್ತಿತ್ತು.
ಅಂತಿಮ ಯಾತ್ರೆ: ಅಂತ್ಯಸಂಸ್ಕಾರಕ್ಕೂ ಮುನ್ನ ಮುನ್ನ ಮೃತರ ಮನೆಯಿಂದ ಸಕರ್ಾರಿ ಶಾಲೆವರೆಗೆ ಗ್ರಾಮದ ಪ್ರಮುಖ ರಸ್ತೆ ಮೂಲಕ ಪುಷ್ಪಾಲಂಕೃತ ತೆರೆದ ವಾಹನದಲ್ಲಿ ಪಾಥರ್ಿವ ಶರೀರದ ಅಂತಿಮ ಯಾತ್ರೆ ನಡೆಯಿತು. ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನರು ಗೌರವದ ವಿದಾಯ ಹೇಳಿದರು. ಶಾಲೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಂದ ಹೊಲದವರೆಗೆ ಪಾಥರ್ಿವ ಶರೀರವನ್ನು ಕೊಂಡೊಯ್ದು ಸಮಾಜದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಹುಮನಾಬಾದ್ ಮತಕ್ಷೇತ್ರದ ಚಿಕ್ಕ ಗ್ರಾಮ ದಾಸರವಾಡಿಯ ಪ್ರತಿಭಾವಂತ ಯುವಕ ಅವಿನಾಶ ಕಷ್ಟಪಟ್ಟು ಓದಿ ಪಿಎಸ್ಐ ಆಗಿದ್ದರು. ದಕ್ಷ ಅಧಿಕಾರಿಯಾಗಿದ್ದ ಅವರ ಅಗಲಿಕೆ ಆಘಾತ ತಂದಿದೆ.ಅವರ ಕುಟುಂಬಕ್ಕೆ ಸಕರ್ಾರ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಸೌಲಭ್ಯ ಕಲ್ಪಿಸಬೇಕು. ಕುಟುಂಬಸ್ಥರಿಗೆ ದುಃಖ ತಡೆಯುವ ಶಕ್ತಿ ಭಗವಂತ ನೀಡಲೆಂದು ಪ್ರಾಥರ್ಿಸುವೆ.
| ರಾಜಶೇಖರ ಪಾಟೀಲ್, ಹುಮನಾಬಾದ್ ಶಾಸಕ
ಕಷ್ಟಪಟ್ಟು ಓದಿ ಉತ್ತಮ ಹುದ್ದೆಯಲ್ಲಿದ್ದ ಪಿಎಸ್ಐ ಅವಿನಾಶ ಯಾದವ್ ಪ್ರತಿಭಾವಂತ, ಬುದ್ದಿವಂತ, ಮಾದರಿ ಯುವಕ. ಕರ್ತವ್ಯದಲ್ಲಿದ್ದಾಗ ಅಪಘಾತದಲ್ಲಿ ಮೃತಪಟ್ಟಿರುವುದು ಅತೀವ ದುಃಖದ ವಿಷಯ. ಗೃಹ ಸಚಿವರೊಂದಿಗೆ ಮೃತರ ತಂದೆ ಅವರನ್ನು ಫೋನ್ನಲ್ಲಿ ಮಾತನಾಡಿಸಿದ್ದು, ಕುಟುಂಬಕ್ಕೆ ಸಕರ್ಾರದಿಂದ ಸೂಕ್ತ ನೆರವು ಕಲ್ಪಿಸಲು ಪ್ರಯತ್ನಿಸಲಾಗುವುದು.
| ಶರಣು ಸಲಗರ, ಬಸವಕಲ್ಯಾಣ ಶಾಸಕ