

ಬೆಳಗಾವಿ: ಅಗರಬತ್ತಿ ಸ್ವಉದ್ಯೋಗದ ಹೆಸರಿನಲ್ಲಿ ನೂರಾರು ಮಹಿಳೆಯರಿಗೆ ವಂಚಿಸಿದ್ದ ಮಹಾರಾಷ್ಟ್ರ ಮೂಲದ ಆರೋಪಿ ಬಾಬಾಸಾಹೇಬ ಲಕ್ಷ್ಮಣ ಕೋಳೆಕರ (35) ಎಂಬಾತನನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮಹಾರಾಷ್ಟ್ರದ ಪಂಢರಪುರ ತಾಲೂಕಿನ ಜಾವೋಲಿ ನಿವಾಸಿ ಬಾಬಾಸಾಹೇಬ, ಬೆಳಗಾವಿ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರನ್ನು ಸ್ವ ಉದ್ಯೋಗದ ಹೆಸರಿನಲ್ಲಿ ವಂಚಿಸಿದ್ದನು. ಬಿ.ಎಂ. ಗ್ರೂಪ್ ಹೆಸರಿನ ಗುರುತಿನ ಪತ್ರ ನೀಡಿ, ಒಬ್ಬೊಬ್ಬರಿಂದ 2,500 ರೂ. ಹಣ ಪಡೆದು, ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದ. ಈ ಕುರಿತು ಬಗ್ಗೆ ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಮಹಿಳೆಯರು ಪ್ರತಿಭಟನೆ ಕೂಡ ನಡೆಸಿದ್ದರು. ಶಹಾಪುರ ಠಾಣೆ ಇನ್‌ಸ್ಪೆಕ್ಟರ್ ಎಸ್.ಎಸ್.ಸಿಮಾನಿ ನೇತೃತ್ವದಲ್ಲಿ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.