

ರಾಯಬಾಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಟ್ಟಣದ ಝೇಂಡಾ ಕಟ್ಟೆ ಬಳಿ ಮುಖ್ಯ ರಸ್ತೆ ಸಂಚಾರ ತಡೆದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಶನಿವಾರ ಪ್ರತಿಭಟಿಸಿದರು.
ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಈಗ ದಿನಬಳಕೆ ವಸ್ತುಗಳ ದರ ಹೆಚ್ಚಿಸಿ ರೈತರಿಗೆ, ಬಡವರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹನಿಟ್ರಾಪ್ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದಾಗ ಬಿಜೆಪಿಯ ೧೮ ಸದಸ್ಯರನ್ನು ಅಮಾನತುಗೊಳಿಸಿರುವ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಜನವಿರೋಧಿ ಸರ್ಕಾರವನ್ನು ತೆಗೆದು ಹಾಕುವವರೆಗೂ ಹೋರಾಟ ನಿರಂತರವಾಗಿರಲಿದೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಮಲ್ಲಪ್ಪ ಮೈಶಾಳೆ, ರಾಜಶೇಖರ ಖನದಾಳೆ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ, ಮಹಾದೇವ ಬೊರಗಾಂವೆ, ಬಸವರಾಜ ಡೊಣವಾಡೆ, ಅಪ್ಪಾಸಾಹೇಬ ಬ್ಯಾಕೂಡೆ, ಗಂಗಾಧರ ಮೈಶಾಳೆ, ನಿಂಗಪ್ಪ ಪಕಾಂಡಿ, ಸುಭಾಷ ಕೋರೆ, ಅನಿಲ ಹಂಜೆ, ರಾಜು ಹರಗನ್ನವರ, ಕಲ್ಲಪ್ಪ ನಿಂಗನೂರೆ, ರಾಜು ಹಳಬರ ಇತರರಿದ್ದರು.