ಅಗತ್ಯ ವಸ್ತು ಖರೀಧಿಸುವಾಗ ಎಚ್ಚರವಿರಲಿ

mm
Published on

ಮಾಗಡಿ : ಪ್ರತಿನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀಸುವ ವೇಳೆ ಎಚ್ಚರ ಇರಲಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜಯಪಾಲ್ ಹೇಳಿದರು.

ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಬುಧವಾರ ಭಾರತೀಯ ಮಾನದಂಡಗಳ ಬಳಕೆ ಬಗ್ಗೆ ಗ್ರಾಪಂ ಅಧ್ಯಕ್ಷರು, ಗ್ರಾಪಂ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ಅರಿವು ಕಾಯಾಗಾರದಲ್ಲಿ ಮಾತನಾಡಿ, ಎಲ್ಲ ವಸ್ತುಗಳು ದುಭಾರಿಯಾಗಿದ್ದು, ನಾಗರಿಕರು ಕಷ್ಟ ಪಟ್ಟು ಖರೀದಿಸುವ ವಸ್ತುಗಳು ಕಳಪೆಯಾಗಿದೆ. ಇದರಿಂದ ತೊಂದರೆ ಅನುಭವಿಸುವಂತಾಗುತ್ತದೆ ಎಂದರು.

ಗ್ರಾಮೀಣ ಗ್ರಾಹಕರು ಪ್ರತಿನಿತ್ಯ ಖರೀದಿಸುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಪ್ರತಿ ವಸ್ತುವಿನ ಮೇಲೆ ಸರ್ಕಾರ ನೀಡಿರುವ ಐಎಸ್‌ಐ ಮಾರ್ಕ್, ಹಾಲ್ ಮಾರ್ಕ್ ಗಮನಿಸಬೇಕು. ಗ್ರಾಹಕರಿಗೆ ಕಳಪೆ ವಸ್ತುಗಳು ಸಿಗುತ್ತಿದ್ದು, ಇದರಿಂದ ಗ್ರಾಹಕರು ಮೋಸಕ್ಕೆ ಒಳಗಾಗುತ್ತಿರುವುದು ಕಂಡು ಬಂದಿರುವುದರಿಂದ ಇದರ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದೆ. ಯಾವುದೇ ವಸ್ತುವಿನ ಖರೀದಿಗೂ ಮುನ್ನ ಅದರ ಐಎಸ್‌ಐ, ಎಚ್‌ಯುಐಡಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬೆಂಗಳೂರಿನ ಭಾರತೀಯ ಮಾನಕ ಬ್ಯೂರೋ ಸಂಶೋಧನಾ ತರಬೇತಿ ಅಧಿಕಾರಿ ಟಿ.ಎಸ್.ಮಹೇಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹತ್ವದ ಬಿಐಎಸ್ ಬಗ್ಗೆ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಗುಣಮಟ್ಟದ ವಸ್ತು ಖರೀದಿಸಲು ಗ್ರಾಮೀಣ ಜನರಿಗೆ ಅರಿವು ಮೂಡಿಸಬೇಕು. ದುಬಾರಿ ವಸ್ತುಗಳ ಮೇಲೆ ಬಿಐಎಸ್ ಮಾರ್ಕ್ ಇದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ನಿರ್ದೇಶಕ ವಿ.ರವಿಚಂದ್ರ, ಶಿವಕುಮಾರ, ಪಿಡಿಒಗಳಾದ ನರಸಿಂಹಮೂರ್ತಿ, ಪುರುಷೋತ್ತಮ್, ಶಿವಕುಮಾರ, ದೇವರಾಜು, ರಾಜೀವ್, ಬಸವರಾಜು, ರಾಮಯ್ಯ, ಸವಿತಾ, ರಾಕೇಶ್, ಪ್ರಭು ಮಹಲಿಂಗಯ್ಯ, ಕೃಷ್ಣಪ್ಪ, ನರಸಿಂಹಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net