ಅಂಗಾಗ ದಾನ : ಕುಟುಂಬದವರಿಗೆ ಸನ್ಮಾನ

felicitation
Published on


ಕಾರವಾರ: ಬೆಂಗಳೂರಿನಲ್ಲಿ ನಡೆದ ಅಪಘಾತಗಳಲ್ಲಿ ಮೃತಪಟ್ಟ ಸಿದ್ದಾಪುರ ತಾಲೂಕಿನ ಇಬ್ಬರ ಕಣ್ಣು, ಕಿಡ್ನಿ, ಹೃದಯ ಸೇರಿ ವಿವಿಧ ಅಂಗಾಂಗಗಳನ್ನು ದಾನ ಮಾಡಿ ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಅವರ ಕುಟುಂಬದವರನ್ನು ಕಾರವಾರದ ಸ್ವಾತಂತ್ರ್ಯೋತ್ಸವದ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಹಸ್ತಾಕ್ಷರ ಮಾಡಿದ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಲಾಯಿತು.
ಕೊಂಡ್ಲಿ ಮೂಲದ ರಾಘವೇಂದ್ರ ಗಾಣಿಗ(51) ಅವರು ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು, ಮಿದುಳು ನಿಷ್ಕ್ರಿಯವಾಗಿ 2023 ರ ಮೇ 24 ರಂದು ಮೃತಪಟ್ಟಿದ್ದರು. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮೂಲಕ ಅವರ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. ಮೃತರ ಪತ್ನಿ ಚಂದ್ರಭಾಗ್ಯ ಗಾಣಿಗ ಅವರನ್ನು ಗುರುವಾರ ಸನ್ಮಾನಿಸಲಾಯಿತು. ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿದ್ದ ಸಿದ್ದಾಪುರ ಪುರದಮಠ ಮೂಲದ ತರುಣ ಬಾಲಚಂದ್ರ ಮಡಿವಾಳ(18) ಅವರು ಕಟ್ಟಡದಿಂದ ಬಿದ್ದು, ಮಿದುಳು ನಿಷ್ಕ್ರಿಯವಾಗಿ 2023 ರ ಫೆಬ್ರವರಿ 19 ರಂದು ಮೃತಪಟ್ಟಿದ್ದರು. ಅಂಗಾಗಗಳನ್ನು ಜಿಬಿಎಸ್ ಗ್ಲೋಬಲ್ ಹಾಸ್ಪಿಟಲ್ ಮೂಲಕ ಕುಟುಂಬಸ್ಥರು ದಾನ ಮಾಡಿದ್ದರು. ಮೃತರ ತಾಯಿ ಲತಾ ಮಡಿವಾಳ ಅವರನ್ನು ಗುರುವಾರ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net