ಅಖಿಲ ಭಾರತ ಸಹಕಾರ ಸಪ್ತಾಹ

25a6b75d-8ea8-4b7b-be90-0141d548ab8a--14
Published on

ಚಿತ್ರದುರ್ಗ: ಸಹಕಾರ ಇಲಾಖೆ, ರಾಜ್ಯಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಜಿಲ್ಲೆಯ ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ನ.14ರಿಂದ 20ರವರೆಗೆ ಜಿಲ್ಲಾದ್ಯಂತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ.
ಪ್ರತಿ ತಾಲೂಕಲ್ಲಿ ಏರ್ಪಡಿಸಿರುವ 7 ದಿನಗಳ ಕಾರ‌್ಯಕ್ರಮಗಳಲ್ಲಿ ಶಾಸಕರು,ಇಲಾಖಾ ಅಧಿಕಾರಿಗಳು,ಹಿರಿಯ ಸಹಕಾರಿಗಳು, ಸಹಕಾರ ಸಂ ಘಗಳು,ಬ್ಯಾಂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಲಿದ್ದಾರೆ. 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು ಈ ವರ್ಷದ ಸಪ್ತಾಹದ ಧ್ಯೇಯವಾಕ್ಯವಾಗಿದೆ. 14 ರಂದು ಬೆಳಗ್ಗೆ 9ಗಂಟೆ ಗೆ ನಗರದ ಸಹಕಾರ ಭವನದಲ್ಲಿ ಸಪ್ತಾಹಕ್ಕೆ ಚಾಲನೆ ಸಿಗಲಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ‌್ಯನಿರ್ವಾಹಣಾಧಿಕಾರಿ ನಾಗರಾಜ ಪಾಟೀಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net