ಅಖಂಡ ಶ್ರೀಹನುಮಾನ ಚಾಲೀಸಾ ಪಾಠ

we
Published on

ಧಾರವಾಡ: ಶ್ರೀಕ್ಷೇತ್ರ ಹೆಬ್ಬಳ್ಳಿಯ ಚೈತನ್ಯಾಶ್ರಮ, ಹು-ಧಾದ ನಾಮಸಾಧಕ ಸಮಿತಿ ವತಿಯಿಂದ ಇಲ್ಲಿನ ರೆಡ್ಡಿ ಕಾಲನಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸೆ. 24 ಹಾಗೂ 25ರಂದು ಅಖಂಡ ಶ್ರೀಹನುಮಾನ ಚಾಲೀಸಾ ಪಾಠ ಏರ್ಪಡಿಸಲಾಗಿದೆ.
ಸೆ. 23ರಂದು ಸಂಜೆ 5.30ಕ್ಕೆ ಮಾಳಮಡ್ಡಿ ರಾಯರಮಠದಿಂದ ವೆಂಕಟೇಶ್ವರ ದೇವಸ್ಥಾನವರೆಗೆ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಪಾದುಕೆ ಹಾಗೂ ಶ್ರೀ ದತ್ತಾವಧೂತರ ಶೋಭಾಯಾತ್ರೆ ನೆರವೇರಲಿದೆ.
ಸೆ. 24ರಂದು ಬೆಳಗ್ಗೆ 5.30ಕ್ಕೆ ಕಾಕಡಾರತಿ, 6.30ಕ್ಕೆ ಅಖಂಡ ಶ್ರೀ ಹನುಮಾನ ಚಾಲೀಸಾ ಪಾಠ ಆರಂಭವಾಗಲಿದ್ದು, 10.30ಕ್ಕೆ ಶ್ರೀಮಹಾರಾಜರ ಪಾದುಕೆಗಳಿಗೆ ರುದ್ರಾಭಿಷೇಕ, ಸಂಜೆ 7.30ಕ್ಕೆ ಮಂತ್ರಪುಷ್ಪ ಅಷ್ಟಾವಧಾನ ಸೇವೆ ಜರುಗಲಿದೆ. ಸೆ. 25ರಂದು ಬೆಳಗ್ಗೆ 5.30ಕ್ಕೆ ಕಾಕಡಾರತಿ, 9.30ಕ್ಕೆ ಶ್ರೀಮಹಾರಾಜರ ಪಾದುಕೆಗಳಿಗೆ ರುದ್ರಾಭಿಷೇಕ, 11.30ಕ್ಕೆ ಸಮಾರೋಪ ಸಮಾರಂಭ ಹಾಗೂ ಆಶೀರ್ವಚನ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net