ಅಖಂಡ ಭಾರತ ಸಂಕಲ್ಪಕ್ಕೆ ಕೈಜೋಡಿಸಿ

1408 Chincholi 01A
ಚಿಂಚೋಳಿ ತಾಲೂಕಿನ ಸುಲೇಪೇಟದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿAದ ಅಖಂಡ ಭಾರತ ಸಂಕಲ್ಪ ದಿನದ ನಿಮಿತ್ತ ಪಂಜಿನ ಮೆರವಣಿಗೆ ನಡೆಯಿತು.
Published on

ಚಿಂಚೋಳಿ: ಪುರಾಣಗಳಲ್ಲಿ ಭಾರತವನ್ನು ಜಂಬೂದ್ವೀಪದಲ್ಲಿ ಗುರುತಿಸಿದ್ದು, ಹೀಗಾಗಿ ನಾವೆಲ್ಲರೂ ನಿತ್ಯ ಪೂಜೆ ವೇಳೆ ಜಂಬೂದ್ವೀಪೆ, ಭರತವರ್ಷೆ, ಭರತಖಂಡೇ ಎಂದು ಪೂಜಿಸಲ್ಪಡುತ್ತೇವೆ. ಇದನ್ನು ಪ್ರತಿಯೊಬ್ಬ ಭಾರತೀಯ ಅರ್ಥೈಸಿಕೊಳ್ಳಬೇಕು ಎಂದು ಬೀದರ್ ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಹೇಳಿದರು.

ಸುಲೇಪೇಟದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿAದ ಗುರುವಾರ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಖಂಡ ಭಾರತದಲ್ಲಿ ಅಪ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಬರ್ಮಾ, ಟಿಬೇಟ್, ನೇಪಾಳ ಎಲ್ಲವೂ ಸೇರಿದೆ. ಇಲ್ಲಿರುವವರೆಲ್ಲರೂ ಮೂಲತಃ ಹಿಂದುಗಳೇ ಆಗಿದ್ದಾರೆ. ಮನಃ ಪರಿವರ್ತನೆಯಾಗಿ ಎಲ್ಲರೂ ಭಾರತದ ಸನಾತನ ಧರ್ಮದ ಛತ್ರದಡಿಯಲ್ಲಿ ಬಂದು ಸೇರಬೇಕು. ಅಖಂಡ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.

ತೆಂಗಿನ ಮಠದ ಶ್ರೀ ಸಿದ್ದಯ್ಯ ಸ್ವಾಮೀಜಿ, ಪ್ರಮುಖರಾದ ಹಣಮಂತರಾವ ಪಾಟೀಲ್, ಪ್ರಜ್ವಲ್ ತಳವಾರ, ಆಕಾಶ ರಾಯಪ್ಪಗೌಡ, ಅಂಬರೀಷರೆಡ್ಡಿ ಗಣಾಪುರ, ರೇವಣಸಿದ್ದಪ್ಪ ಮೋಘಾ, ವೀರೇಂದ್ರ ಮುರುಡಾ, ಶರಣು ನಾಟೀಕಾರ, ಚನ್ನಬಸಪ್ಪ ಕಲ್ಲನೂರ, ಬಸಯ್ಯ ಗುಡಿ, ಸಂಗಮೇಶ ಭೋಜಿ, ನಾಮದೇವ ಪಾಟೀಲ್, ವಿನಯ ಮ್ಯಾದರ, ಮಾಂತೇಶ ಸಾಲಿ, ರವಿ ಮಂಗಲಗಿರಿ, ಶರಣು ವಾಲಿಕಾರ, ವಿಶಾಲ ಮಡಿವಾಳ, ರಾಜು ಡಾಬಾ, ಸಂಗಮೇಶ ಮಠಪತಿ, ಶರಣು ಸೊಂತ, ಸಿದ್ದು ಹೊಸಳ್ಳಿ, ವೈಜನಾಥ ದಾದಿ, ಚಂದು ಮಲಸಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net