

ಯಾದಗಿರಿ : ದೇಶ ವಿಭಜನೆ ಮಾಡಿದ ಕರಾಳ ಘಟನೆಯನ್ನು ಬಿಂಬಿಸುವ ಮತ್ತು ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಹೋರಾಟಗಾರರನ್ನು ಸ್ಮರಿಸುವ ನಿಟ್ಟಿನಲ್ಲಿ ಸೋಮವಾರ ರಾತ್ರಿ ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಜಿಲ್ಲಾ ಬಿಜೆಪಿಯಿಂದ ಪಂಜಿನ ಮೆರವಣಿಗೆ ನಡೆಯಿತು.
ಜಿಲ್ಲಾಧ್ಯP್ಷÀ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಮಾತನಾಡಿ, ಆ.೧೪ರಂದು ರಾತ್ರಿ ದೇಶ ವಿಭಜನೆ ನಡೆದ ಕರಾಳ ಘಟನೆಯ ಬೆನ್ನಲ್ಲೇ ಸ್ವಾತಂತ್ರö್ಯ ಸಿಕ್ಕಿದ್ದರಿಂದ ಕರಾಳತೆ ಮೆರೆದವರ ಬಗ್ಗೆ ದೇಶ ಗಮನಿಸಬೇಕಿದೆ. ಲಕ್ಷಾಂತರ ಜನರು ಪ್ರಾಣ, ಆಸ್ತಿ-ಪಾಸ್ತಿ ಕಳೆದುಕೊಂಡು ಅನಾಥರಾಗಿ ಭಾರತಕ್ಕೆ ಬಂದರು. ಅವರ ಬದುಕು ಮೂರಾಬಟ್ಟೆ ಆಗಿರುವುದನ್ನು ನೆನಪಿಸಿಕೊಂಡು ಸ್ವಾತಂತ್ರÈದ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಎAಎಲ್ಸಿ ಛಲವಾದಿ ಟಿ.ನಾರಾಯಣಸ್ವಾಮಿ ಮಾತನಾಡಿ, ದೇಶದ ಸ್ವಾತಂತ್ರö್ಯಕ್ಕಾಗಿ ಅನೇಕರು ಗಲ್ಲಿಗೇರಿದರು. ಲಾಠಿ ಏಟು ತಿಂದರು. ಜೀವದ ಹಂಗು ತೊರೆದು ಬ್ರಿಟಿಷರ ವಿರುದ್ಧ ಹೋರಾಡಿ ವೀರಮರಣ ಅಪ್ಪಿದ ದೇಶಪ್ರೇಮಿಗಳಿಗೆ ಪಂಜಿನ ಶ್ರದ್ಧಾಂಜಲಿ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪ್ರಮುಖರಾದ ವಿಲಾಸ ಪಾಟೀಲ್, ಖಂಡಪ್ಪ ದಾಸನ್, ಪರಶುರಾಮ ಕುರಕುಂದಿ, ಎಂ.ಕೆ. ಬಿರನೂರ, ರಮೇಶ ದೊಡ್ಡಮನಿ, ಆನಂದ ಗಡ್ಡಿಮನಿ, ಶರಣುಗೌಡ ಕನ್ಯಕೊಳುರ, ವೀಣಾ ಮೋದಿ ಇದ್ದರು.