ಅಕ್ಷರದ ಗುಡಿಯಲ್ಲಿ ನಾನು-ನನ್ನವ್ವ

2102 KLB 03
Published on

ಕಲಬುರಗಿ: ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ವಿಜಿ ಉತ್ಸವ-2020 ನಿಮಿತ್ತ ವಿದ್ಯಾರ್ಥಿನಿಯರಿಗಾಗಿ ಅಕ್ಷರದ ಗುಡಿಯಲ್ಲಿ ನಾನು ನನ್ನವ್ವ ಎಂಬ ವಿನೂತನ ಕಾರ್ಯಕ್ರಮ ಮಾದರಿಯಾಗಿ ನಡೆಯಿತು. ಮಾತೆಯರು ಮತ್ತು ಮಕ್ಕಳಿಗಾಗಿ ಕೆಲ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕ್ಕಳು ಹಾಗೂ ಶಿಕ್ಷಕರ ಕರೆಗೆ ಓಗೊಟ್ಟು ತಾಯಂದಿರು ತಮ್ಮ ಮಕ್ಕಳ ಅಕ್ಷರದ ಗುಡಿಗೆ ಆಗಮಿಸಿ ಶಿಕ್ಷಕರೊಂದಿಗೆ ಅವರ ವಿದ್ಯಾಭ್ಯಾಸದ ಮಾಹಿತಿ ಪಡೆದು ಸುಪ್ತವಾದ ಪ್ರತಿಭೆ ಹೊರತೆಗೆಯಲು ಸೂಕ್ತ ವೇದಿಕೆ ಒದಗಿಸಿ ಕೊಡುತ್ತಿರುವುದನ್ನು ಶ್ಲಾಘಿಸಿದರು.
ಖ್ಯಾತ ವೈದ್ಯೆ ಡಾ.ಮೀನಾಕ್ಷಿ ದೇವರಮನಿ ಹಾಗೂ ಎಚ್ಕೆಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಅನುರಾಧಾ ದೇಸಾಯಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಗಳಲ್ಲಿನ ಪ್ರತಿಭೆ ಹೊರಹಾಕುವ ಕಾಲೇಜಿನ ಕಾಯಕವನ್ನು ಕೊಂಡಾಡಿದರು. ನಾವಿಬ್ಬರೂ ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿನಿಯರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.
ಉಪ ಪ್ರಾಚಾರ್ಯ ಡಾ.ವೀಣಾ ಹೊನಗುಂಟಿಕರ, ವಿದ್ಯಾರ್ಥಿ ಸಂಘದ ಸಲಹೆಗಾರ್ತೊ ಉಮಾ ಮಿಣಜಗಿ, ಡಾ.ವಿಜಯಕುಮಾರ ಪರುತೆ, ಡಾ.ನೀಲಕಂಠ ವಾಲಿ, ಡಾ.ಮಹೇಶಕುಮಾರ ಗಂವ್ಹಾರ, ಡಾ.ಮೋಹನರಾಜ ಪತ್ತಾರ, ಡಾ.ಶಾಂತಾ ಮಠ, ಡಾ.ಪ್ರವೀಣ ಮೂಲಗೆ ಇದ್ದರು. ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ ಸ್ವಾಗತಿಸಿದರು. ಡಾ.ಮೀನಾಕ್ಷಿ ಬಾಳಿ ನಿರೂಪಣೆ ಮಾಡಿದರು. ವಿದ್ಯಾರ್ಥಿನಿಯರಾದ ಸಾಕ್ಷಿ ಪಿ., ಸ್ಫೂರ್ತಿ ಎಚ್. ಮತ್ತು ಸಂಗಡಿಗರು ವಚನಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net