

ಕಲಬುರಗಿ: ಜೇವರ್ಗಿ ತಾಲೂಕಿನ ಅಧ್ಯಕ್ಷರ ದಾಸೋಹದ ಧಾನ್ಯ ಸರಬರಾಜು ಮಾಡುವಲ್ಲಿ ತಾಲೂಕು ಅಧಿಕಾರಿ ಎರಡು ತಿಂಗಳಲ್ಲೇ ೬೫ ಲಕ್ಷ ರೂ. ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಶ್ರೀ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು. ಕಳೆದ ವರ್ಷ ಜೇವರ್ಗಿ ತಾಲೂಕಿನ ೨೯೦ ಶಾಲೆಗೆ ಎರಡು ತಿಂಗಳ ಧಾನ್ಯ ಸರಬರಾಜು ಮಾಡುವಲ್ಲಿ ಅಕ್ರಮವಾಗಿದೆ. ಈ ಕುರಿತು ಜಿಪಂ ಸಿಇಒ ಅವರು ಅಧಿಕಾರಿಯನ್ನು ಅಮಾನತು ಮಾಡಿದ್ದರು. ಆದರೆ ಜಿಪಂ ಅಧಿಕಾರಿಗಳು ಸಮರ್ಪಕ ದಾಖಲೆ ಕೆಎಟಿಗೆ ಸಲ್ಲಿಸದ್ದಕ್ಕೆ ೨೦ ದಿನದಲ್ಲೇ ಕೆಎಟಿ ತಡೆಯಾಜ್ಞೆ ತಂದ್ದು, ಪುನಃ ಅದೇ ಹುದ್ದೆಯಲ್ಲಿ ಮುಂದುವರಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಕ್ಷರ ದಾಸೋಹ ಧಾನ್ಯ ಸರಬರಾಜು ಅಕ್ರಮ ಕುರಿತು, ೩೦೦ ಪುಟದ ದಾಖಲೆ ಜತೆಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ. ಡಿಸಿ ತನಿಖೆಗೆ ಪ್ರತ್ಯೇಕ ತಂಡ ರಚಿಸಿz್ದÁರೆ. ಆದರೆ, ತಡರಾತ್ರಿ ಮೂರು ಗಂಟೆಗೆ ಭ್ರಷ್ಟ ಮಹಿಳಾ ಅಧಿಕಾರಿಯೂ ತನಿಖಾಧಿಕಾರಿಗೆ ತನಿಖೆಯಲ್ಲಿ ನನ್ನ ಹೆಸರು ಬಂದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಈ ಅಧಿಕಾರಿ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದು ಆರೋಪಿಸಿದರು. ನೆಲೋಗಿ, ಸೊನ್ನ, ಜೇರಟಗಿಯ ದಾಸೋಹ ಮಠಗಳು ನಡೆಸುವ ಶಾಲೆಗಳಿಗೆ ಅP್ಷÀರ ದಾಸೋಹ ಧಾನ್ಯ ಸರಬರಾಜಿನಲ್ಲಿ ಅಕ್ರಮ ಮಾಡಲಾಗಿದೆ. ಮಾತ್ತೆತ್ತಿದ್ದರೆ ಬಸವ ತತ್ವ ಹೇಳುವ ಸರ್ಕಾರ, ಮಠದ ಧಾನ್ಯಗಳಿಗೆ ಕನ್ನ ಹಾಕುತ್ತಿದೆ. ಕೂಡಲೇ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.