ಅಕ್ಷರ ದಾಸೋಹ ಎಫ್‌ಡಿಎ ಅಮಾನತು

Suspend
Published on

ಚಿತ್ರದುರ್ಗ: ನಿಯಮ ಬಾಹಿರವಾಗಿ ಟೆಂಡರ್ ಲಕೋಟೆ ತೆರೆದು, ಆರ್ಥಿಕ ಬಿಡ್ ದರ ತಿದ್ದುಪಡಿ ಮಾಡಿದ ಆರೋಪದಡಿ ಜಿಪಂ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕಿ ಆಯೇಷಾ ಸಿದ್ದಿಖಾ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ. ಪ್ರಸಕ್ತ ಸಾಲಿನ ಅಕ್ಷರ ದಾಸೋಹ ಕಾರ‌್ಯಕ್ರಮ ಅನುಷ್ಠಾನ ಸಂಬಂಧ ಇಲಾಖೆ ಉಪಯೋಗಕ್ಕೆ ಬಾಡಿಗೆ ಆಧಾರದ ಮೇಲೆ ಹೊರಗುತ್ತಿಗೆಯಡಿ ವಾಹನ ಪಡೆಯಲು ಟೆಂಡರ್ ಕರೆಯಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮ ಉಲಂಘಿಸಿ ಆಯೇಷಾ ಸಿದ್ದಿಖಾ ಅವರು ಟೆಂಡರ್ ಲಕೋಟೆಗಳನ್ನು ಒಪನ್ ಮಾಡಿದ್ದಾರೆ. ದರ ತಿದ್ದುಪಡಿ ನಂತರದಲ್ಲಿ ತಿದ್ದುಪಡಿಯಾದ ಪ್ರತಿಗಳನ್ನೂ ಕಡತದಿಂದ ತೆಗೆದು ಹಾಕಿದ್ದಾರೆ. ಈ ಕುರಿತಂತೆ ಪರಿಶೀಲಿಸಿದ ಜಿಪಂ ಸಿಎಒ ವರದಿ ಆಧರಿಸಿ ಸಿಇಒ ವಿಚಾರಣೆ ಕಾಯ್ದಿರಿಸಿ, ಅಮಾನತಿಗೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net