ಅಕ್ಷರ ಕಲಿಸಿದಾತನ ಸ್ಮರಿಸುವುದು ಅಗತ್ಯ

4
Published on

ಯರಗಟ್ಟಿ: ಎಲ್ಲ ಶಾಲೆಗಳನ್ನು ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಡಿಡಿಪಿಐ ಲೀಲಾವತಿ
ಹಿರೇಮಠ ಹೇಳಿದರು.

ಇಲ್ಲಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದರು. ನನ್ನ ಶಾಲೆಗೆ ನನ್ನ ಕೊಡುಗೆ ಏನು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿ ಇರಬೇಕು. ಕಲಿತ ಶಾಲೆ, ಕಲಿಸಿದ ಗುರುವನ್ನು ಸದಾ ಸ್ಮರಿಸಬೇಕು. ಅರ ಪಡೆದಿರುವುದು ನಮ್ಮ ಸಾರ್ಥಕ್ಯ ಎಂದರು.

ಐಪಿಎಸ್​ ಅಧಿಕಾರಿ ಜಿತೇಂದ್ರ ಕಣಗಾವಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಇರುವ ಐಎಎಸ್​, ಐಪಿಎಸ್​ನಂಥ ಉನ್ನತ ಪರೀೆ ಎದುರಿಸುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು. ಸಾನ್ನಿಧ್ಯ ವಹಿಸಿದ ಭಾಗೋಜಿಕೊಪ್ಪದ ಶಿವಲಿಂಗ ಮುರುರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅಶ್ಲೀಲ ಸಾಹಿತ್ಯದ ಮೂಲಕ ನಮ್ಮ ಆಚಾರ ವಿಚಾರ ಹಾಗೂ ಸಂಸತಿಯನ್ನು ಹಾಳುಮಾಡುತ್ತಿರುವುದು ಬಹಳಷ್ಟು ಬೇಸರದ ಸಂಗತಿ. ಯುವಜನತೆ ಅದಕ್ಕೆ ಮಾರುಹೋಗಬಾರದು ಎಂದರು.

ಎನ್​.ಕೆ. ಹುಚರಡ್ಡಿ ಅಧ್ಯತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ, ಬಿಇಒ ಮೋಹನ ದಂಡಿನ, ರಮೇಶಗೌಡ ದೇವರಡ್ಡಿ, ಎಂ.ಎ್​. ಮದ್ದಾನಿ, ಎ.ಎಂ. ಚೌಡಪ್ಪನವರ, ಆರ್​.ಎಲ್​. ಜೂಗನವರ, ಪಿ.ಎಚ್​. ಪಾಟೀಲ, ಎಸ್​.ಎಸ್​. ಕುರಬಗಟ್ಟಿಮಠ, ಎಸ್​.ಎನ್​. ಯಮನಕ್ಕನವರ, ಬಿ.ಎಸ್​. ಆಲದಕಟ್ಟಿ, ರಾಜಶೇಖರ ಬಿರಾದಾರ, ಸುಮಿತ್ರಾ ಹಿರೇಮಠ, ಉಮಾದೇವಿ ಪೂರ್ವಿಮಠ, ಗೀತಾ ಪಾಟೀಲ, ಸೋಮು ಮಾಳಗಿ, ಕುಮಾರ ಜಕಾತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net