ಅಕ್ಷಯಕುಮಾರ್ ಚಿಂತಾಮಣಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ

123
Published on

ಚಿಂತಾಮಣಿ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯ ಅಕ್ಷಯಕುಮಾರ್ ಅವಿರೋಧ ಆಯ್ಕೆಯಾಗಿದ್ದಾರೆ. ಸ್ಥಾಯಿ ಸಮಿತಿಗೆ ಗುರುವಾರದ ಚುನಾವಣೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಶಾಸಕ ಎಂ.ಕೃಷ್ಣಾರೆಡ್ಡಿ ಬೆಂಬಲಿತ 8 ಸದಸ್ಯರು ಹಾಗೂ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿತ 8 ಸದಸ್ಯರು ಹಾಗೂ ಪಕ್ಷೇತರ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಸದಸ್ಯರು ಮತ್ತು ಕಾಂಗ್ರೆಸ್‌ನ ಒಬ್ಬ ಸದಸ್ಯ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರಗಳ ಪರಿಶೀಲನೆ ವೇಳೆ ಶಾಸಕ ಎಂ.ಕೃಷ್ಣಾರೆಡ್ಡಿ ಬೆಂಬಲಿತ ಎನ್.ಮಂಜುನಾಥ್, ಟಿ.ಬಿ.ಮಂಜುಳಾ, ಕೆ.ಜಯಮ್ಮ ಮತ್ತು ಎಸ್. ಮಂಜುಳಾ ಮತ್ತು ಪಕ್ಷೇತರ ಅಭ್ಯರ್ಥಿ ಇಶ್ರತ್ ಉನ್ನೀಸಾ ಅವರ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಣದಲ್ಲಿ 12 ಮಂದಿ ಇದ್ದರು.

ನಂತರ ನಡೆದ ಮತದಾನದಲ್ಲಿ ಸಂಸದ ಎಸ್,ಮುನಿಸ್ವಾಮಿ ಸಹ ಮತ ಚಲಾಯಿಸಿದರು, ಪಕ್ಷೇತರ ಸದಸ್ಯ ಅಕ್ಷಯಕುಮಾರ್ 17 ಮತ ಪಡೆದರೆ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿತ ಸದಸ್ಯರಾದ ಕಲಾವತಿ, ಗೀತಾ ಎಂ.ಪಿ, ಜಗದೀಶ್, ಮುನಿರಾಜು, ರಾಣಿ, ಶೋಭಾ ಮತ್ತು ಹರೀಶ್ ತಲಾ 17 ಮತ ಪಡೆದುಕೊಂಡು ಸದಸ್ಯರಾಗಿ ಆಯ್ಕೆಯಾದರು.

ಶಾಸಕ ಎಂ.ಕೃಷ್ಣಾರೆಡ್ಡಿ ಬೆಂಬಲಿತ ಸದಸ್ಯರಾದ ಸಿ.ಕೆ.ಶಬ್ಬೀರ್ 3, ಕೃಷ್ಣಮೂರ್ತಿ 1, ಶಂಕರ್.ಡಿ.ಎನ್. ಮತ್ತು ಮಹಮದ್‌ಗೌಸ್‌ಗೆ ಶೂನ್ಯ ಮತಗಳು ಪಡೆದಿದ್ದು, 3 ಮತಗಳನ್ನು ಪಡೆದುಕೊಂಡು ಸಿ.ಕೆ.ಶಬ್ಬೀರ್ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ನಗರಸಭೆ ಸದಸ್ಯ ಅಕ್ಷಯ ಕುಮಾರ್ ಅವಿರೋಧ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net