ಅಕ್ಷಯ ಫುಡ್‌ಪಾರ್ಕ್,ಸಂಕಷ್ಟದಲ್ಲಿ ಸಬ್‌ಲೀಸ್ ಉದ್ದಿಮೆದಾರರು

CTD 28 DC MEETING (3)--03
Published on

ಚಿತ್ರದುರ್ಗ: ಹಿರಿಯೂರು ತಾಲೂಕು ಹುಚ್ಚವ್ವನಹಳ್ಳಿ ಅಕ್ಷಯ ಫುಡ್‌ಪಾರ್ಕ್‌ನಲ್ಲಿ ಸಬ್‌ಲೀಸ್ ಪಡೆದು ಈವರೆಗೂ ಉದ್ದಿಮೆ ಪ್ರಾರಂಭಿಸದಿರುವ ಉದ್ದಿಮೆ ದಾರರ ಲೀಸ್ ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸುವ ಸಲುವಾಗಿ ಕೆಐಎಡಿಬಿ ನಿಯಮಗಳ ತಿದ್ದುಪಡಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಪಿಪಿಪಿಯಡಿ ನಿರ್ಮಿಸಿರುವ ಅಕ್ಷಯ ಫುಡ್‌ಪಾರ್ಕ್‌ನಲ್ಲಿರುವ 96 ನಿವೇಶನಗಳ ಪೈಕಿ 89ನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ನಿವೇಶನಗಳಲ್ಲಿ 14 ಉದ್ಯಮಗಳು ಪ್ರಾರಂಭ ಗೊಂಡಿದ್ದು,ನಿವೇಶನ ಪಡೆದಿರುವ ಹಲವು ಉದ್ದಿಮೆದಾರರು,ನಾನಾ ಕಾರಣಗಳಿಂದಾಗಿ ಉದ್ಯಮ ಪ್ರಾರಂಭಿಸಿಲ್ಲ. ಪಾರ್ಕ್ ಅಧಿಕಾರಿಗಳಿಗೆ ನೀಡಿದ್ದ ಲೀಸ್‌ಅವಧಿಯನ್ನು ಸರ್ಕಾರ ಈಗಾಗಲೇ 10 ವರ್ಷಗಳಿಗೆ ವಿಸ್ತರಿಸಿದೆ.
ಆದರೆ ಉದ್ದಿಮೆದಾರರಿಗೆ ನಿಯಮಾನುಸಾರ 3 ವರ್ಷಗಳ ಅವಧಿಗೆ ಸಬ್‌ಲೀಸ್ ನೀಡಿರುವ ಅಕ್ಷಯ ಫುಡ್‌ಪಾರ್ಕ್,ಸಬ್‌ಲೀಸ್ ಅವಧಿ ವಿಸ್ತ ರಿಸುತ್ತಿಲ್ಲ ಹಾಗೂ ಸಾಲಕ್ಕೆ ಎನ್‌ಒಸಿ ಕೊಡುತ್ತಿಲ್ಲ,ಇದರಿಂದಾಗಿ ಉದ್ದಿಮೆದಾರರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೈಗಾರಿಕೆ ಇಲಾಖೆ ಜಂಟಿ ನಿ ರ್ದೇಶಕ ಬಿ.ಆನಂದ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೆಐಎಡಿಬಿ ಅಧಿಕಾರಿ ಲಕ್ಷ್ಮೀಶ್ ಅವರು,ಪಾರ್ಕ್ ಅವಧಿಯನ್ನು ಲೀಸ್‌ಅವಧಿಯನ್ನು 10 ವರ್ಷಗಳಿಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ ಸಂಬಂಧಿಸಿದವರು ಸ್ಪಂದಿಸುತ್ತಿಲ್ಲವೆಂದರು. ಪಾರ್ಕ್ ವ್ಯವಸ್ಥಾಪಕ ನಿರ್ದೇಶಕ ನಾರಾಯಣಸ್ವಾಮಿ ಅವರು,ಕೆಐಎಡಿಬಿ ನಿಯಮ ಗಳನ್ವಯ 3 ವರ್ಷಗಳ ಒಳಗೆ ಉದ್ಯಮ ಪ್ರಾರಂಭಿಸದ ಉದ್ದಿಮೆದಾರರಿಗೆ ಸಬ್‌ಲೀಸ್‌ನ್ನು ಹೆಚ್ಚುವರಿಯಾಗಿ 1 ವರ್ಷ ವಿಸ್ತರಿಸಲು ಅವಕಾಶ ವಿದೆ,ಈ ಕುರಿತಂತೆ ಕೆಐಎಡಿಬಿಯಿಂದ ಸ್ಪಷ್ಟ ಆದೇಶ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.
ಜಿಲ್ಲೆಯಲ್ಲಿ ಉದ್ಯಮಗಳು ಪ್ರಾರಂಭವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗಬೇಕಿದೆ. ಆದರೆ ಅಕ್ಷಯ ಫುಡ್‌ಪಾರ್ಕ್‌ನವರು, ಒಡಂಬಡಿಕೆಗೆ ಅನುಗುಣವಾಗಿ ನಡೆದುಕೊಳ್ಳದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಡಿಸಿ ಬೇಸರ ವ್ಯಕ್ತಪಡಿಸಿದರು. ಮೂಲ ಸೌಕರ್ಯಗಳನ್ನು ಒದಗಿಸದಿರುವುದು ಕೂಡ ಷರತ್ತುಗಳ ಉಲ್ಲಂಘನೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. ಹಂಚಿಕೆಯಾಗಿರುವ ನಿವೇಶನದಲ್ಲಿ ಕೆಲವರು ಶೆಡ್ ನಿರ್ಮಿಸಿಕೊಂಡಿದ್ದಾರೆ ಉದ್ಯಮಿ ವೆಂಕಟೇಶ್ ತಿಳಿಸಿದರು. ಎರಡು ತಿಂಗಳ ಒಳಗಾಗಿ ತೆರವುಗೊಳಿಸುವುದಾಗಿ ನಾರಾಯಣಸ್ವಾಮಿ ತಿಳಿಸಿದರು.
ಚಳ್ಳಕೆರೆಯ ಬೊಮ್ಮಸಂದ್ರ ಕೈಗಾರಿಕಾ ವಸಾಹತುವಿನಲ್ಲಿ ಶ್ರೀ ಮಾರುತಿ ಎಕ್ಸ್‌ಪೋರ್ಟ್ ರೆಡಿಮೇಡ್ ಗಾರ್ಮೆಂಟ್ಸ್ ಘಟಕ ಸ್ಥಾಪನೆಗೆ ಸಮಿತಿ ಒಪ್ಪಿಗೆ ಸೂಚಿಸಿತು. ಜಿಲ್ಲೆಯ ಎಲ್ಲ ತಾಲೂಕುಗಳು ಕೈಗಾರಿಕಾ ಸ್ಥಾಪನೆಯಲ್ಲಿ ಅತ್ಯಂತ ಹಿಂದುಳಿದಿವೆ,ಹೊಳಲ್ಕೆರೆ ತಾಲೂಕು ಹೊರತುಪಡಿಸಿ, ಉಳಿದ ತಾಲೂಕುಗಳನ್ನು ಕೈಗಾರಿಕಾ ಕ್ಷೇತ್ರದ ವಲಯದ ಹಿಂದುಳಿದ ವಲಯ -2ರಲ್ಲಿ ಗುರುತಿಸಲಾಗಿದೆ.
ಇದರಿಂದಾಗಿ ಸರ್ಕಾರದಿಂದ ಕೈಗಾರಿಕಾ ಕ್ಷೇತ್ರದ ಉತ್ತೇಜನೆಗೆ ಈ ತಾಲೂಕುಗಳಲ್ಲಿ ಹೆಚ್ಚಿನ ಸೌಲಭ್ಯ ದೊರಕುತ್ತಿಲ್ಲ,ಆದ್ದರಿಂದ ಜಿಲ್ಲೆಯ ಎಲ್ಲ ತಾ ಲೂಕುಗಳನ್ನು ಅತ್ಯಂತ ಹಿಂದುಳಿದ ವಲಯ-1ರಲ್ಲಿ ನಿಗದಿಪಡಿಸುವಂತೆ,ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಕೆಂಚವೀರಪ್ಪ ಅವರು ಮನ ವಿ ಮಾಡಿದರು.
ರಾಜ್ಯದಲ್ಲಿ ಪ್ರಸ್ತುತ ಹೊಸ ಕೈಗಾರಿಕಾ ನೀತಿ ರೂಪಿಸುವ ಬಗ್ಗೆ ಚರ್ಚೆಗಳು ನಡೆದಿದ್ದು,ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ವಲಯ-1ರಲ್ಲಿ ಸೇರು ವ ಸಾಧ್ಯತೆ ಇದೆ ಎಂದು ಆನಂದ್ ಹೇಳಿದರು. ಈ ಕುರಿತು ಪ್ರಸ್ತಾವನೆ ಕಳಿಸುವಂತೆ ಹಾಗೂ ಮೊಳಕಾಲ್ಮೂರಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪನೆ ಸಂ ಬಂಧ ಜಂಟಿ ಸಮೀಕ್ಷೆ ನಡೆಸಿ ಮಾಡಿ ವರದಿ ಸಲ್ಲಿಸುವಂತೆ ಡಿಸಿ ಸೂಚಿಸಿದರು.
ಪ್ರಧಾನಮಂತ್ರಿ ಉದ್ಯೋಗ ಸೃಜನದಡಿ ನಿಗದಿತ ಅವಧಿಯೊ ಳಗೆ ಸಾಲ ಮಂಜೂರು ಮಾಡಬೇಕೆಂದು ಡಿಸಿ ಹೇಳಿದರು.ಆನಂದ್ ಪ್ರಗತಿ ಮಾಹಿತಿ ನೀಡಿದರು. ಖಾದಿ ಗ್ರಾಮೋದ್ಯಗ ಮಂಡಳಿಯಿಂದ ಸಾಲ ಮಂಜೂರು ಮಾಹಿತಿಯನ್ನು ಕೆವಿಐಬಿ ಅಧಿಕಾರಿ ಸುಜಾತಾ ತಿಳಿಸಿದರು.
(ಸಿಟಿಡಿ 28 ಡಿಸಿ ಮೀಟಿಂಗ್)
ಚಿತ್ರದುರ್ಗದಲ್ಲಿ ಸೋಮವಾರ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಜರುಗಿತು. ಡಿಸಿ ಜಿಆರ್‌ಜೆ ದಿವ್ಯಾಪ್ರಭು,ಕೈಗಾರಿಕೆ ಇಲಾಖೆ ಜಂಟಿ ನಿ ರ್ದೇಶಕ ಬಿ.ಆನಂದ್,ಕೆಐಡಿಬಿ ಅಧಿಕಾರಿ ಲಕ್ಷ್ಮೀಶ್,ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಕೆಂಚವೀರಪ್ಪ,ಕೆವಿಐಬಿ ಅಧಿಕಾರಿ ಸುಜಾತ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net