ಅಕ್ರಮವಾಗಿ ಸಾಗಿಸುತ್ತಿದ್ದ 545 ಕೆಜಿ ಅಕ್ಕಿ ವಶ

1212
Published on

ನಿಪ್ಪಾಣಿ: ಆಟೋದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 545 ಕೆಜಿ ಪಡಿತರ ಅಕ್ಕಿಯನ್ನು ಸೋಮವಾರ ವಶಕ್ಕೆ ಪಡೆಯಲಾಗಿದೆ.

ನಿಖರ ಮಾಹಿತಿಯೊಂದಿಗೆ ತಾಲೂಕು ಆಹಾರ ನಿರೀಕ ಅಭಿಜೀತ ಗಾಯಕವಾಡ ದಾಳಿ ನಡೆಸಿ 11 ಚೀಲಗಳಲ್ಲಿ ಸಾಗಿಸುತ್ತಿದ್ದ ಸುಮಾರು 12.3 ಸಾವಿರ ರೂ. ಮೌಲ್ಯದ ಅಕ್ಕಿ ವಶಪಡಿಸಿಕೊಂಡು ಪಟ್ಟಣದ ಹಿದಾಯತ್​ ನಗರದ ಅಝರ್​ ಅಕ್ಬರ್​ ಮುಜಾವರ್​ (29) ಎಂಬಾತನನ್ನು ಬಂಧಿಸಿದ್ದಾರೆ.

ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net