ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ವಶ

21 NRD-4
Published on

ನರಗುಂದ: 1 ಲಕ್ಷ 96 ಸಾವಿರ ರೂಪಾಯಿ ಮೌಲ್ಯದ 245 ಚೀಲ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯೊಂದನ್ನು ತಾಲೂಕಿನ ಶಿರೋಳ ಗ್ರಾಮದ ಕೆಇಬಿ ಗ್ರಿಡ್ ಹತ್ತಿರ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.

ಶಿರೋಳ ಗ್ರಾಮದ ನಜೀರಸಾಬ ಇಮಾಮಸಾಬ ಚಳ್ಳಮರದ ಎಂಬಾತ ಅನ್ನ ಭಾಗ್ಯದ ನೂರಾರು ಚೀಲ ಅಕ್ಕಿಯನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ. ಇದನ್ನು ಬಾಗಲಕೋಟೆ ಲಾರಿ ಚಾಲಕ ಹಾಗೂ ಮಾಲೀಕ ರಾಜು ಮರಡಿ ಎಂಬಾತನ ಸಹಾಯದಿಂದ ಬೇರೆಡೆಗೆ ಸಾಗಿಸಲಾಗುತ್ತಿತ್ತು.

ಈ ಕುರಿತು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಲಾರಿ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಲಾರಿ ಚಾಲಕ ರಾಜು ಮರಡಿ ಹಾಗೂ ಪಡಿತರ ಮಾರಾಟಗಾರ ನಜೀರಸಾಬ ಚಳ್ಳಮರದ ಪರಾರಿಯಾಗಿದ್ದಾರೆ.

ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ, ಆಹಾರ ನಿರೀಕ್ಷಕ ಅನಿಲ ಪವಾರ, ಎಎಸ್​ಐ ವಿ.ಜಿ.ಪವಾರ, ಶರಣಪ್ಪ ನಾಗೇಂದ್ರಗಢ, ಎಸ್.ಆರ್. ರಾಯನಗೌಡ್ರ, ಉಮೇಶ ಸುಣಗಾರ, ಸುರೇಶ ಚೆಟ್ರಿ, ಎಸ್.ಎನ್. ಚಿಮ್ಮನಕಟ್ಟಿ, ಸುರೇಶ ಮಣಕವಾಡ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net