

ಕೊಳ್ಳೇಗಾಲ: ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಆಣೆಹೊಲ ಗ್ರಾಮದ ಚಂದ್ರ ಎಂಬುವರು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದು ಆತನನ್ನು ಬಂಧಿಸಿದ್ದಾರೆ. ಚಂದ್ರ, ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಸುನೀಲ್ ತಂಡ ದಾಳಿ ನಡೆಸಿ 5.400 ಲೀ. ಮದ್ಯ ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ಡಿ. ಶ್ರೀಧರ, ಕೆ.ಪ್ರದೀಪ್ ಕುಮಾರ್, ಬಿ.ಸಿದ್ದರಾಜು ಇದ್ದರು.
ಕೊಳ್ಳೇಗಾಲದ ಅಬಕಾರಿ ಕಚೇರಿಯಲ್ಲಿ ಅಬಕಾರಿ ನಿರೀಕ್ಷಕ ಸುನೀಲ್ ಮತ್ತು ತಂಡದವರು ಅಕ್ರಮ ಮದ್ಯ ಸಂಗ್ರಹ ಮಾಡಿದ್ದ ಆರೋಪಿಯನ್ನು ಬಂಧಿಸಿರುವುದು.