ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳು ವಶ

1kglphoto-5,,
Published on

ಕೊಳ್ಳೇಗಾಲ: ಪಟ್ಟಣದ ನಾಯಕರ ದೊಡ್ಡ ಬೀದಿಯ ಹೊಸ ಬಡಾವಣೆಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುವ ಸಲುವಾಗಿ ಶೇಖರಣೆ ಮಾಡಿದ್ದ 52 ಚೀಲ ಮರಳನ್ನು ಪಟ್ಟಣ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಉಪ್ಪಾರಮೋಳೆ ಬಡಾವಣೆಯ ಮಹೇಶ ಎಂಬಾತನೇ ಮರಳು ಮೂಟೆಯನ್ನು ಸಂಗ್ರಹಿಸಿಟ್ಟಿದ್ದ ವ್ಯಕ್ತಿ.


ಈತನು ಕಾವೇರಿ ನದಿಯಿಂದ ಮರಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಮರಳು ತುಂಬಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಪಟ್ಟಣದ ಸಮೀಪದಲ್ಲಿ ತಂದು ಶೇಖರಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಪರೀಶೀಲಿಸಿದಾಗ ಮರಳು ಮೂಟೆಗಳು ದೊರೆತಿದೆ. ಆದರೆ, ಪೊಲೀಸರು ದಾಳಿ ನಡೆಸುವ ವಿಚಾರ ತಿಳಿದ ಆರೋಪಿ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಸದ್ಯ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net