ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ

4-RNR-03
Published on

ರಾಣೆಬೆನ್ನೂರ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳು ಹಾಗೂ 1.41 ಲಕ್ಷ ರೂ. ಮೌಲ್ಯದ 235 ಅಕ್ಕಿ ಚೀಲ, 1 ಲಾರಿಯನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಡಿಯೋಲ್ ಢಾಬಾ ಸಮೀಪ ಬುಧವಾರ ರಾತ್ರಿ ನಡೆದಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗಾಂಧಿನಗರದ ನಿವಾಸಿ ಲಾರಿ ಚಾಲಕ ಜಿ.ಕೆ. ಶಿವರಾಜ್ ಹಾಗೂ ಕ್ಲೀನರ್ ಮಾರುತಿ ಸಂಜೀವಪ್ಪ ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ನಗರದ ಗುರಣ್ಣ ಶೇಖಪ್ಪ ಉಪ್ಪಿನ ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಇವರು ಲಾರಿಯಲ್ಲಿ ಪಡಿತರ ಅಕ್ಕಿ ಚೀಲಗಳನ್ನು ತುಂಬಿಕೊಂಡು ಅಕ್ರಮವಾಗಿ ತುಮಕೂರಿಗೆ ಸಾಗಿಸುತ್ತಿದ್ದರು. ಈ ಸಮಯದಲ್ಲಿ ಪೊಲೀಸರು ಲಾರಿ ತಡೆದು ವಿಚಾರಿಸಿದ್ದಾರೆ. ಆಗ ಲಾರಿ ಚಾಲಕ ಶಿವರಾಜ್, ಪಡಿತರ ಅಕ್ಕಿಯನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾನೆ. ಆದರೆ, ಅದರ ಬಗ್ಗೆ ಯಾವುದೇ ದಾಖಲೆ ಇಲ್ಲದ ಕಾರಣ ಇಬ್ಬರು ಆರೋಪಿ, ಅಕ್ಕಿ ಚೀಲ ಹಾಗೂ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net