ಅಕ್ರಮವಾಗಿ ನೀಲಗಿರಿ ಸಾಗಾಣಿಕೆ; ನಾಟಾ, ಲಾರಿ ವಶ

WEB CRIME
Published on

ಸಾಗರ: ಅಕ್ರಮವಾಗಿ ಅಕೇಶಿಯಾ ನಾಟಾ ಸಾಗಿಸುವಾಗ ಪೊಲೀಸ್, ಅರಣ್ಯ ಸಂಚಾರ ದಳದ ಸಿಬ್ಬಂದಿ ದಾಳಿ ನಡೆಸಿ ಲಾರಿ ಸಹಿತ ನಾಟಾವನ್ನು ವಶಪಡಿಸಿಕೊಂಡಿದ್ದಾರೆ. ಹೊಸನಗರ ತಾಲೂಕಿನ ಹುಳಿಗದ್ದೆ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಯಾವುದೇ ಪರವಾನಗಿ ಇಲ್ಲದೆ ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಕಡಿದು ಲಾರಿಗೆ ಲೋಡ್ ಮಾಡುತ್ತಿದ್ದಾಗ ದಾಳಿ ನಡೆಸಿದ ಅಧಿಕಾರಿಗಳು, ವುಡ್ ಕಟಿಂಗ್ ಯಂತ್ರದ ಜತೆಗೆ ಲಾರಿಯನ್ನು ವಶಕ್ಕೆ ಪಡೆದು, ಹೊಸನಗರ ಅರಣ್ಯ ಇಲಾಖೆಗೆ ಮುಂದಿನ ಕಾನೂನು ಕ್ರಮಕ್ಕೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net