ಅಕ್ರಮವಾಗಿ ಜಾನುವಾರು ಸಿಗುತ್ತಿದ್ದವನ ಬಂಧನ

Published on

ಚಾಮರಾಜನಗರ: ಚಾಮರಾಜನಗರದಿಂದ ತಮಿಳುನಾಡಿನ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಒಬ್ಬ ಆರೋಪಿಯನ್ನು ಪೂರ್ವ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ತಾಲೂಕಿನ ಕೋಡಿಮೊಳೆ ಬಸವನಪುರ ನಿವಾಸಿ ರೇವಣ್ಣ(34) ಬಂಧಿತ. ಆಪೆ ಗೂಡ್ಸ್ ವಾಹನ ಮತ್ತು 2-3 ಕರುಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತೋರ್ವ ಆರೋಪಿ ಹರದನಹಳ್ಳಿ ಮನ್ಸೂರ್ ಪರಾರಿಯಾಗಿದ್ದು, ಪತ್ತೆಗೆ ಕ್ರಮವಹಿಸಲಾಗಿದೆ. ಪ್ರಕರಣದ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net