ಅಕ್ರಮಖಾತೆಗಳ ತನಿಖೆ ನಡೆಸುವಂತೆ ಮನವಿ

Published on

ಚಾಮರಾಜನಗರ: ನಗರದ ತಾಲೂಕು ಕಚೇರಿ ಸಮೀಪದ ಜಾಗವನ್ನು ಅಕ್ರಮವಾಗಿ ಖಾತೆಮಾಡಿಕೊಟ್ಟಿದ್ದ, ಈ ಸಂಬಂಧ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಒತ್ತಾಯಿಸಿದರು.

ನಗರದ ತಾಲೂಕಿನ ಕಚೇರಿಯ ಸಮೀಪದಲ್ಲಿರುವ 60 ನಿವೇಶನಗಳನ್ನು ಪುರಸಭೆ ಮಹದೇವಪ್ಪ ಅವರ ಮಕ್ಕಳಾದ ಶೈಲಜಾ ಮತ್ತು ಅರ್ಜುನ್ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ. ಆದರೆ, ಈ ಆಸ್ತಿಯನ್ನು ಪರಿಶಿಷ್ಟ ಜಾತಿ ಮತ್ತು ದೇವಾಂಗ ಜನಾಂಗದವರಿಗೆ ಸೇರಿದ್ದಾಗಿತ್ತು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಈ 60 ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಿರುವ ಹಿಂದೆ, ಹಲವಾರು ರಾಜಕಾರಣಿಗಳ ಕೈವಾಡವಿದೆ. ಅವರ ಬೆಂಬಲದಿಂದಲೇ ಅಕ್ರಮ ಖಾತೆಗಳನ್ನು ಮಾಡಲಾಗಿದೆ. ಇದರಲ್ಲಿ ನಗರಸಭಾ ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ವಹಿಸಬೇಕು, ಇಲ್ಲವಾದರೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಂಜು ಎಂ.ನಾಯಕ್, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ ನಾಯಕ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net